ಬಲೂನ್‍ನಿಂದ ಇಂಟರ್ ನೆಟ್

ಬೃಹತ್ ಗಾತ್ರದ ಬಲೂನ್‍ಗಳನ್ನು ಬಳಸಿಕೊಂಡು ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ಪ್ರಾಯೋಗಿಕ ಯೋಜನೆ ಕುರಿತು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಬೃಹತ್ ಗಾತ್ರದ ಬಲೂನ್‍ಗಳನ್ನು ಬಳಸಿಕೊಂಡು ಇಂಟರ್ ನೆಟ್ ಸೌಲಭ್ಯ ಕಲ್ಪಿಸುವ ಪ್ರಾಯೋಗಿಕ ಯೋಜನೆ ಕುರಿತು ಬೃಹತ್ ಇಂಟರ್ ನೆಟ್ ಸಂಸ್ಥೆ ಗೂಗಲ್ ಕೇಂದ್ರ ಸರ್ಕಾರದ ಜೊತೆಗೆ ಮಾತುಕತೆ ನಡೆಸುತ್ತಿದೆ. 
ಗೂಗಲ್ ತನ್ನ `ಪ್ರಾಜೆಕ್ಟ್ ಲೂನ್' ಅಡಿಯಲ್ಲಿ ಬೃಹತ್ ಗಾತ್ರದ ಬಲೂನ್ ಗಳನ್ನು ಭೂಮಿಯಿಂದ 20 ಕಿ.ಮೀಟರ್ ಎತ್ತರಕ್ಕೆ ಬಿಟ್ಟು ಅದರ ಮೂಲಕ ಸೇವೆಗಳನ್ನು ಕಲ್ಪಿಸಲಿದೆ. ಗೂಗಲ್ ಈಗಾಗಲೆ ನ್ಯೂಜಿಲೆಂಡ್, ಕ್ಯಾಲಿಫೋರ್ನಿಯಾ ಮತ್ತು ಬ್ರೆಜಿಲ್‍ಗಳಲ್ಲಿ ಈಗಾಗಲೆ ಪರೀಕ್ಷೆ ನಡೆಸಿದೆ. 
ಲೂನ್ ಮತ್ತು ಡ್ರೋನ್ ಆಧರಿತ ಯೋಜನೆ ರೂಪಿಸುವುದಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಕುರಿತು ಅಗತ್ಯ ಕ್ರಮ ಜರುಗಿಸಲು ಡಿಇಐಟಿವೈ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಆರಂಭದಲ್ಲಿ ಪರೀಕ್ಷೆ ನಡೆಸಲು ಬಿಎಸ್‍ಎನ್‍ಎಲ್ ಜೊತೆ ಗೂಗಲ್ ಪಾಲುದಾರಿಕೆ ಮಾಡಿಕೊಳ್ಳಲಿದೆ. 
2.6 ಗೀಗಾ ಹಟ್ರ್ಸ್ ಬ್ಯಾಂಡ್ ಇದಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. 4ಜಿ ಸೇವೆಗಳಿಗೆ ಬಳಸಿಕೊಳ್ಳುವ ತಂತ್ರಜ್ಞಾನಕ್ಕೆ ಮೊಬೈಲ್ ಟವರ್‍ಗಳು ಅಗತ್ಯವಿಲ್ಲ. 4ಜಿ ಮೊಬೈಲ್ ಗಳಿಂದ ನೇರವಾಗಿ ಸಿಗ್ನಲ್‍ಗಳನ್ನು ಹೊರಹೊಮ್ಮಿಸಬಹುದಾಗಿದೆ. 4ಜಿ ತಂತ್ರಜ್ಞಾನದಿಂದ ಪ್ರತಿ ಬಲೂನ್ ಬಳಸಿ 40 ಕಿ.ಮೀಟರ್ ವ್ಯಾಪ್ತಿಗೆ ಸೇವೆಗಳನ್ನು ಒದಗಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com