
ವಾಷಿಂಗ್ ಟನ್: ಅನ್ಯಗ್ರಹ ಜೀವಿಗಳ ಶೋಧನೆಗೆ ನಾಸಾ ಹೊಸ ಮಾದರಿಯ ಮೊರೆ ಹೋಗಿದ್ದು, ಕೆಮಿಕಲ್ ಲ್ಯಾಪ್ ಟಾಪ್ ತಯಾರಿಸುತ್ತಿದೆ. ಭೂಕಕ್ಷೆಯಿಂದ ಅನ್ಯಗ್ರಹಕ್ಕೆ ಈ ವರೆಗೂ ತಲುಪಿರುವ ಸಾಧನಗಳಲ್ಲಿ ಕೆಮಿಕಲ್ ಲ್ಯಾಪ್ ಟಾಪ್ ಅತ್ಯಂತ ಸೂಕ್ಷ್ಮ ಸಾಧನವಾಗಿರಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ತಯಾರಿಕೆ ಹಂತದಲ್ಲಿರುವ ಕೆಮಿಕಲ್ ಲ್ಯಾಪ್ ಟಾಪ್ ನ್ನು ಅನ್ಯಗ್ರಹ ಜೀವಿಗಳಿಗಾಗಿ ಶೋಧನೆ ನಡೆಯುತ್ತಿರುವ ಮಂಗಳ ಗ್ರಹ ಅಥವಾ ಯುರೋಪಾಗೆ ಕಲಿಸಲಾಗುತ್ತದೆ.
ಲ್ಯಾಪ್ ಟಾಪ್ ಗಾತ್ರದಷ್ಟೇ ಇರಲಿರುವ ಕೆಮಿಕಲ್ ಲ್ಯಾಪ್ ಟಾಪ್ ಅನ್ಯಗ್ರಹದಲ್ಲಿ ಜೀವಿಗಳ ಅಸ್ತಿತ್ವಕ್ಕೆ ಕಾರಣವಾಗಿರುವ ಅಮೋನಿಯಾ ಹಾಗೂ ಫ್ಯಾಟಿ ಆಸಿಡ್ ಗಳನ್ನು ಕಂಡುಹಿಡಿಯಲಿದೆ. ಬೇರೆ ಬೇರೆ ಕಾರ್ಯಗಳನ್ನು ನಿರ್ವಹಿಸುವುದಕ್ಕೆ ಲ್ಯಾಪ್ ಟಾಪ್ ನಂತೆಯೇ ಇದನ್ನೂ ಸಹ ರೀಪ್ರೊಗ್ರಾಮ್ ಮಾಡಬಹುದು, ಸಾಮಾನ್ಯ ಲ್ಯಾಪ್ ಟಾಪ್ ಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಇರುವ ಆಪ್ ಗಳಂತೆಯೇ ಕೆಮಿಕಲ್ ಲ್ಯಾಪ್ ಟಾಪ್ ನಲ್ಲಿ ಜೀವಿಗಳ ಅಸ್ತಿತ್ವಕ್ಕೆ ಅಮೋನಿಯಾ ಆಸಿಡ್ ಹಾಗೂ ಫ್ಯಾಟಿ ಆಸಿಡ್ ಗಳನ್ನು ವಿಶ್ಲೇಷಣೆ ಮಾಡಲು ಆಪ್ ಗಳನ್ನು ತಯಾರಿಸಲಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
Advertisement