ಒಂದು ವೇಳೆ ಅನ್ಯಗ್ರಹ ಜೀವಿ ಭೂಮಿಗೆ ಬಂದರೆ ಏನಾಗುತ್ತದೆ?

ಒಂದು ವೇಳೆ ಅನ್ಯಗ್ರಹ ಜೀವಿಗಳು ಯಾವುದಾದರೂ ಇತರ ಗ್ರಹಗಳಿಗೆ ಬಂದರೆ ಅವು ಅಲ್ಲೊಂದು ಸಮೂಹವನ್ನು ನಿರ್ಮಿಸಿ, ಆ ಗ್ರಹವನ್ನು ವಶ ಪಡಿಸಲು...
ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್
ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಉತ್ತರ ನೀಡಿದ್ದಾರೆ.
ಇಎಲ್ ಪೈಸ್ ಎಂಬ ಸುದ್ದಿಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹಾಕಿಂಗ್ಸ್ ಅನ್ಯ ಗ್ರಹ ಜೀವಿಗಳು ಭೂಮಿಗೆ ಬಂದರೆ ಏನು ಮಾಡುತ್ತವೆ ಎಂದು ಹೇಳಿದ್ದಾರೆ.
ಒಂದು ವೇಳೆ ಅನ್ಯಗ್ರಹ ಜೀವಿಗಳು ಯಾವುದಾದರೂ ಇತರ ಗ್ರಹಗಳಿಗೆ ಬಂದರೆ ಅವು ಅಲ್ಲೊಂದು ಸಮೂಹವನ್ನು ನಿರ್ಮಿಸಿ, ಆ ಗ್ರಹವನ್ನು ವಶ ಪಡಿಸಲು ಯತ್ನಿಸುತ್ತವೆ. ಅನ್ಯಗ್ರಹ ಜೀವಿಗಳು ಭೂಮಿಗೆ ಬಂದರೆ ಅದರ ಪರಿಣಾಮ ಕೊಲಂಬಸ್ ಅಮೆರಿಕವನ್ನು ಪತ್ತೆ ಹಚ್ಚಿದಾಗ ಆದ ಪರಿಣಾಮ ಇದೆಯಲ್ಲಾ ಅದರಂತೆ ಆಗಲಿದೆ. ಅಂದರೆ ಅಲ್ಲಿ ಈ ಮೊದಲೇ ಇರುವ ಪ್ರಾಣಿ ಅಥವಾ ಮನುಷ್ಯರಿಗೆ ಉಳಿಗಾಲವಿರುವುಲ್ಲ.
ಅನ್ಯಗ್ರಹ ಜೀವಿಗಳು ಯಾವುದೇ ಗ್ರಹಗಳಿಗೆ ಬಂದರೆ ಅಲ್ಲಿ ಸುತ್ತಲೂ ಸಂಚರಿಸಿ ಆ ಗ್ರಹದ ಮೇಲೆ ಅಧಿಪತ್ಯವನ್ನು ಸ್ಥಾಪಿಸಲು ಯತ್ನಿಸುತ್ತವೆ. ಅನ್ಯಗ್ರಹ ಜೀವಿಗಳು ಭಾರೀ ವಿವೇಚನೆಯುಳ್ಳವುಗಳಾಗಿರುತ್ತವೆ ಆದರೆ ಅನ್ಯಗ್ರಹ ಜೀವಿಗಳು ಹೇಗೆ ಇರುತ್ತವೆ ಎಂದ ಕರಾರುವಕ್ಕಾಗಿ ಹೇಳಲಾಗುವುದಿಲ್ಲ ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com