ಜಗತ್ತಿನ ಅತೀ ದೊಡ್ಡ ರಹಸ್ಯ ಸ್ತ್ರೀ: ಸ್ಟೀಫನ್ ಹಾಕಿಂಗ್

ನಮ್ಮ ಭೂಮಿಯಲ್ಲಿರುವ ಮಹಿಳೆಯರು ಜಗತ್ತಿನಲ್ಲಿರುವ ಅತೀ ನಿಗೂಢತೆಗಳಲ್ಲೊಂದು ಎನ್ನುವ ಮೂಲಕ ಸ್ಟೀಫನ್ ಹಾಕಿಂಗ್ ಅಚ್ಚರಿ...
ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್
Updated on
ಬಹುತೇಕ ವಿಜ್ಞಾನಿಗಳು ಜಗತ್ತಿನ ನಿಗೂಢತೆಗಳ ಬೆನ್ನು ಹತ್ತಿ ಹೊರಟಿದ್ದಾರೆ. ಇಂತಿರ್ಪ, ನಮ್ಮ ಭೂಮಿಯ ಹೊರಗಿನ ಗ್ರಹಗಳು, ನಕ್ಷತ್ರಗಳು, ಅನ್ಯಗ್ರಹ ಜೀವಿಗಳ ಬಗ್ಗೆ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಈಗ ತನ್ನ ಸಂಶೋಧನೆಗೆ ವ್ಯತಿರಿಕ್ತವಾಗಿರುವ ಹೇಳಿಕೆಯೊಂದನ್ನು ನೀಡಿದ್ದಾರೆ.
ನಮ್ಮ ಭೂಮಿಯಲ್ಲಿರುವ ಮಹಿಳೆಯರು ಜಗತ್ತಿನಲ್ಲಿರುವ ಅತೀ ನಿಗೂಢತೆಗಳಲ್ಲೊಂದು ಎನ್ನುವ ಮೂಲಕ ಸ್ಟೀಫನ್ ಹಾಕಿಂಗ್ ಅಚ್ಚರಿ ಮೂಡಿಸಿದ್ದಾರೆ.
ಈ ಜಗತ್ತಿನಲ್ಲಿ ನನ್ನನ್ನು ಹೆಚ್ಚು ಚಕಿತಗೊಳಿಸಿದ್ದು ಮಹಿಳೆಯರೇ. ನನ್ನರಿವಿನಲ್ಲಿ ಹೇಳುವುದಾದರೆ ಜಗತ್ತಿನ ಅತೀ ದೊಡ್ಡ ರಹಸ್ಯ ಸ್ತ್ರೀ ಆಗಿದ್ದಾಳೆ. ರೆಡಿಟ್ ಆಸ್ಕ್ ಮಿ ಎನಿಥಿಂಗ್ ಎಂಬ ಕಾರ್ಯಕ್ರಮದಲ್ಲಿ ಹಾಕಿಂಗ್ ಈ ಒಂದು ಮಾತನ್ನು ಹೇಳಿದ್ದಾರೆ. 
ಜಗತ್ತಿಗೆ ಇನ್ನೂ ಬಿಟ್ಟುಕೊಡದ ರಹಸ್ಯಗಳನ್ನು, ನಿಗೂಢತೆಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡವಳು ಸ್ತ್ರೀ. ಜಗತ್ತಿಗೆ ಅವಳ ರಹಸ್ಯವನ್ನು ಭೇದಿಸಲು ಸಾಧ್ಯವಿಲ್ಲ ಎಂಬುದು ಹಾಕಿಂಗ್ ಅಭಿಪ್ರಾಯ.
ನಿಮ್ಮ ಜೀವನದಲ್ಲಿನ ಭೇದಿಸಲಾಗದ ರಹಸ್ಯ ಯಾವುದು ಎಂದು ಕೇಳಿದ್ದಕ್ಕೆ ಹಾಂಕಿಂಗ್ ಈ ರೀತಿ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com