ನೌಕರರಿಗೆ ಕೆಲಸ ಮಾಡಲು ಉತ್ತಮ ಸಂಸ್ಥೆ ಗೂಗಲ್

ಮೆರಿಕಾ ಮೂಲದ ಸಾಫ್ಟ್ ವೇರ್ ದೈತ್ಯ ಗೂಗಲ್ ನಿರಂತರ ಮೂರನೇ ವರ್ಷವೂ ವಿಶ್ವದ ಅತ್ಯುತ್ತಮ ಕಂಪನಿಗಳ ಅಗ್ರಸ್ಥಾನ ಪಡೆದುಕೊಂಡಿದೆ. ...
ಗೂಗಲ್ ಕಂಪನಿ  (ಸಂಗ್ರಹ ಚಿತ್ರ)
ಗೂಗಲ್ ಕಂಪನಿ (ಸಂಗ್ರಹ ಚಿತ್ರ)

ನವದೆಹಲಿ: ಅಮೆರಿಕಾ ಮೂಲದ ಸಾಫ್ಟ್ ವೇರ್ ದೈತ್ಯ ಗೂಗಲ್ ನಿರಂತರ ಮೂರನೇ ವರ್ಷವೂ ವಿಶ್ವದ ಅತ್ಯುತ್ತಮ ಕಂಪನಿಗಳ ಅಗ್ರಸ್ಥಾನ ಪಡೆದುಕೊಂಡಿದೆ.

ನೌಕರರಿಗೆ ಕೆಲಸ ಮಾಡಲು ಇರುವ ವಿಶ್ವದ ಅತ್ಯುತ್ತಮ ಕಂಪನಿಗಳ ಪಟ್ಟಿಯಲ್ಲಿ ಗೂಗಲ್ ಈ ವರ್ಷವೂ ಅಗ್ರಸ್ಥಾನ ಕಾಪಾಡಿಕೊಂಡಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಸಂಸ್ಥೆ 'ಎಸ್‌ಎಎಸ್' ಮತ್ತು ತಯಾರಿಕಾ ಕಂಪನಿ ಡಬ್ಲ್ಯು.ಎಲ್. ಗೋರೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿವೆ.

ಕೆಲಸ ಮಾಡಲು ಅತ್ಯುತ್ತಮ ಬಹುರಾಷ್ಟ್ರೀಯ ಕಂಪನಿಗಳಾಗಿ ಹೊರಹೊಮ್ಮಿರುವ 25 ಕಂಪನಿಗಳು ಜಾಗತಿಕ ಕಂಪನಿಗಳಾಗಿವೆ. ಡೇಟಾ ಸ್ಟೋರೇಜ್ ವ್ಯವಹಾರದಲ್ಲಿ ನಿರತವಾಗಿರುವ ನೆಟ್‌ಆ್ಯಪ್ ನಾಲ್ಕನೇ ಸ್ಥಾನದಲ್ಲಿದ್ದರೆ, ಮೊಬೈಲ್ ಕಮ್ಯುನಿಕೇಷನ್ಸ್ ಸೇವೆ ಒದಗಿಸುತ್ತಿರುವ ಟೆವಿಫೋನಿಕಾ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇಎಂಸಿ ಕಾರ್ಪೊರೇಷನ್ 6ನೇ ರ‌್ಯಾಂಕ್ ಪಡೆದಿದೆ. ಬಿಲ್ ಗೇಟ್ಸ್ ಒಡೆತನದ ಮೈಕ್ರೊಸಾಫ್ಟ್ 7ನೇ ಸ್ಥಾನದಲ್ಲಿದೆ.

ಸಂಶೋಧನೆ ಮತ್ತು ಸಲಹಾ ಸೇವೆ ಒದಗಿಸುತ್ತಿರುವ 'ಗ್ರೇಟ್ ಪ್ಲೇಸ್ ಟು ವರ್ಕ್ ಇನ್‌ಸ್ಟಿಟ್ಯೂಟ್' ಹಲವಾರು ಕಂಪನಿಗಳ ನೌಕರರ ಸಮೀಕ್ಷೆ  ನಡೆಸಿ, ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಭಾರತದ ಯಾವುದೇ ಕಂಪನಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com