ನಾಸಾ ಮಂಗಳಯಾನಕ್ಕೆ ನಿಮ್ಮ ಹೆಸರು ಕಳುಹಿಸಿ

ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾದ ಮಂಗಳಯಾನಕ್ಕೆ ನೀವೊಂದು ಹೆಸರು ಸೂಚಿಸಲು ಬಯಸುತ್ತೀರಾ? ನಾಸಾದ ಮುಂದಿನ ಮಂಗಳಯಾನಕ್ಕೆ
ಇನ್ಸೈಟ್ ಮಂಗಳಯಾನದ ಕಲಾಚಿತ್ರ
ಇನ್ಸೈಟ್ ಮಂಗಳಯಾನದ ಕಲಾಚಿತ್ರ

ವಾಶಿಂಗ್ಟನ್: ಅಮೇರಿಕಾ ಬಾಹ್ಯಾಕಾಶ ಸಂಸ್ಥೆ ನಾಸಾದ ಮಂಗಳಯಾನಕ್ಕೆ ನಿಮ್ಮ ಹೆಸರು ಕಳುಹಿಸಲು ಬಯಸುತ್ತೀರಾ? ನಾಸಾದ ಮುಂದಿನ ಮಂಗಳಯಾನಕ್ಕೆ ಸಾರ್ವಜನಿಕರು ತಮ್ಮ ಹೆಸರು ಸೂಚಿಸಲು ಮಂಗಳವಾರ ಕೊನೆಯ ದಿನ.

ಮಾರ್ಚ್ ೨೦೧೬ ರಲ್ಲಿ ನಾಸಾ ಸಂಸ್ಥೆ, ಕೆಂಪು ಗ್ರಹದ ಅಧ್ಯಯನಕ್ಕಾಗಿ ರೋಬೋಟ್ ಚಾಲಿತ ಇನ್ಸೈಟ್ ಯಾನವನ್ನು ಕಳುಹಿಸಲಿದೆ. ನೀವು ಕಳುಹಿಸುವ ಹೆಸರನ್ನು ಇನ್ಸೈಟ್ ಲ್ಯಾಂಡರ್ ನ ಗಣಕಯಂತ್ರದ ಚಿಪ್ ನಲ್ಲಿ ಅದನ್ನು ನಮೂದಿಸಲಾಗುತ್ತದೆ.

ಇಂಟೀರಿಯರ್ ಎಕ್ಸ್ಪ್ಲೋಲೋರೇಶನ್ ಫಾರ್ ಸೈಂಟಿಫಿಕ್ ಇನ್ವೆಸ್ಟಿಗೇಶನ್ಸ್ (ಇನ್ಸೈಟ್), ವ್ಯಾಂಡನ್ಬರ್ಗ್ ವಾಯು ತಾಣದಿಂದ ಮಾರ್ಚ್ ೪ ೨೦೧೬ ರಂದು ಅಟ್ಲಾಸ್ ವಿ ೪೦೧ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಚಿಮ್ಮಲಿದೆ.

ಈ ಯಾನ ಮಂಗಳ ಗ್ರಹದ ಮೇಲೆ ಸೆಪ್ಟಂಬರ್ ೨೦ ೨೦೧೬ಕ್ಕೆ ತಳವೂರಲಿದೆ. ಈ ಮಂಗಳಯಾನ ಎರಡು ವರ್ಷಗಳ ಕಾಲ ಮುಂದುವರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com