ಕುಬ್ಜಗ್ರಹ ಪತ್ತೆ ಹಚ್ಚಿದ ನಾಸಾದ ಡಾನ್ ಬಾಹ್ಯಾಕಾಶ

ಪುಟ್ಟಗ್ರಹವಾದ ಸೆರೆಸ್ ಮೇಲೆ ಹೊಳೆಯುತ್ತಿರುವ ಎರ‌ಡು ಕಿರು ಸ್ಥಳಗಳನ್ನು ನಾಸಾದ ಡಾನ್ ಬಾಹ್ಯಾಕಾಶ ನೌಕೆ...
ನಾಸಾದ ಡಾನ್ ಬಾಹ್ಯಾಕಾಶ ನೌಕೆ ಸೆರೆಸ್ ಗ್ರಹದ ಮೇಲೆ ಹೊಳೆಯುತ್ತಿರುವ ಎರ‌ಡು ಕಿರು ಸ್ಥಳ (ಚಿತ್ರ ಕೃಪೆ: ನಾಸಾ)
ನಾಸಾದ ಡಾನ್ ಬಾಹ್ಯಾಕಾಶ ನೌಕೆ ಸೆರೆಸ್ ಗ್ರಹದ ಮೇಲೆ ಹೊಳೆಯುತ್ತಿರುವ ಎರ‌ಡು ಕಿರು ಸ್ಥಳ (ಚಿತ್ರ ಕೃಪೆ: ನಾಸಾ)

ವಾಷಿಂಗ್‌ಟನ್: ಪುಟ್ಟಗ್ರಹವಾದ ಸೆರೆಸ್ ಮೇಲೆ ಹೊಳೆಯುತ್ತಿರುವ ಎರ‌ಡು ಕಿರು ಸ್ಥಳಗಳನ್ನು ನಾಸಾದ ಡಾನ್ ಬಾಹ್ಯಾಕಾಶ ನೌಕೆ ಪತ್ತೆ ಹಚ್ಚಿದೆ.
ಮಂಗಳ ಹಾಗೂ ಜ್ಯೂಪಿಟರ್‌ನ ಕೆಳಗೆ ಇರುವ ಈ ಸೆರೆಸ್ ಗ್ರಹದ ಶೋಧನೆಯಲ್ಲಿರುವ ನಾಸಾದ ಡಾನ್ ಬಾಹ್ಯಾಕಾಶ ನೌಕೆ ಇತ್ತೀಚೆಗೆ ಅದರ ಮೇಲೆ ಗುರುತಿಸಿರುವ ಎರಡು ಕಿರು ಪ್ರದೇಶಗಳಲ್ಲಿ ಒಕಾಟೋರ್ ಹೆಸರಿನ ಭಾಗ ಅತ್ಯಂತ ಪ್ರಕಾಶಮಾನವಾಗಿದೆ ಎಂದು ಡಾನ್ ಶೋಧ ನೌಕೆಯ ಮುಖ್ಯ ಇಂಜಿನಿಯರ್ ಮಾರ್ಕ್ ರಯಾನ್ ಹೇಳಿದ್ದಾರೆ.
ಡಾನ್‌ ಬಾಹ್ಯಾಕಾಶ ನೌಕೆ ಸೆರೆನ್ ಗ್ರಹದ ಶೋಧನೆಗೆ ಹೊರಟಿರುವ ಮೊಟ್ಟ ಮೊದಲ ಬಾಹ್ಯಾಕಾಶ ನೌಕೆಯಾಗಿದೆ.
ಶೀಘ್ರದಲ್ಲಿಯೇ ಇದರ ದತ್ತಾಂಶಗಳು ಹಾಗೂ ಚಿತ್ರಗಳ ವೈಜ್ಞಾನಿಕ ವಿಶ್ಲೇಷಣೆಯಿಂದ ಈ ಗ್ರಹದ ರಚನೆಯ ಕುರಿತಂತೆ ಇನ್ನಷ್ಟು ಅಂಶಗಳು ತಿಳಿಯುತ್ತದೆ ಎಂದಿರುವ ನಾಸಾ ಮೂಲಗಳು, ಈ ಶೋಧನೆಯಿಂದ ಈ ಗ್ರಹದಲ್ಲೂ ಹಿಮದ ಮತ್ತು ಉಪ್ಪಿನ ನಿಕ್ಷೇಪಗಳು ಇರುವ ಸಂಭವ ಇದೆ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com