ಗಗನಯಾತ್ರಿಗಳ ಅಮೇಧ್ಯವನ್ನು ಬಾಹ್ಯಾಕಾಶದಲ್ಲಿ ಸುಡಲಿರುವ ನಾಸಾ

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐ ಎಸ್ ಎಸ್) ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಹಲವು
ನಾಸಾ ಬಿಡುಗಡೆ ಮಾಡಿರುವ ಚಿತ್ರ
ನಾಸಾ ಬಿಡುಗಡೆ ಮಾಡಿರುವ ಚಿತ್ರ
Updated on

ವಾಶಿಂಗ್ಟನ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐ ಎಸ್ ಎಸ್) ಹಲವಾರು ವರ್ಷಗಳಿಂದ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಅಮೆರಿಕಾ ಬಾಹ್ಯಾಕಾಶ ಸಂಸ್ಥೆ ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಗಗನಯಾತ್ರಿ ಸ್ಕಾಟ್ ಕೆಲ್ಲಿ ಅವರು ವಿಸರ್ಜಿಸಿರುವ ಅಮೇಧ್ಯ ಮತ್ತು ಆ ವಿಸರ್ಜನೆ ಮೇಲೆ ಬಾಹ್ಯಾಕಾಶ ಹೇಗೆ ಕೆಲಸ ಮಾಡುತ್ತದೆ ಎಂಬುದು.

ಕೆಲ್ಲಿ ಐ ಎಸ್ ಎಸ್ ನಲ್ಲಿ ತಂಗಿದ್ದ ೩೪೨ ದಿನಗಳಲ್ಲಿ ೮೨ ಕೆ ಜಿ ಅಮೇಧ್ಯವನ್ನು ವಿಸರ್ಜಿಸಿದ್ದಾರೆ.

"ಹಲವಾರು ಹಂತಗಳಲ್ಲಿ ಈ ಕಸವನ್ನು ಐ ಎಸ್ ಎಸ್ ನಿಂದ ವಿಸರ್ಜಿಸಿ ಭೂಮಿಯ ವಾತಾವರಣದಲ್ಲಿ ಸುಡಲಾಗುವುದು ಮತ್ತು ಅದು ಬೀಳುತ್ತಿರುವ ನಕ್ಷತ್ರದಂತೆ ಕಾಣುತ್ತದೆ" ಎಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಾಹ್ಯಾಕಾಶ ಯಾನದಲ್ಲಿ ರಶಿಯಾದ ಕಾಸ್ಮೋನಾಟ್ ಮಿಕೈಲ್ ಕಾರ್ನಿಯೆಂಕೋ ಕೂಡ ಭಾಗವಹಿಸಿದ್ದು, ಬಾಹ್ಯಾಕಾಶದಲ್ಲಿ ಮಾನವರ ದೀರ್ಘ ಸಂಬಂಧದ ಸಂಶೋಧನೆ ನಡೆಯುತ್ತಿದೆ.

ಐ ಎಸ್ ಎಸ್ ನಲ್ಲಿ ತಾವು ಜೀವಿಸಿದ ಅವಧಿಯಲ್ಲಿ ಕೆಲ್ಲಿ ಅವರು ರೀಸೈಕಲ್ ಮಾಡಿದ ೭೩೦ ಲೀಟರ್ ಮೂತ್ರ ಮತ್ತು ಬೆವರನ್ನು ಕುಡಿಯಲಿದ್ದಾರೆ.

"ಗಗನಯಾತ್ರಿ ಸ್ಕಾಟ್ ಕೆಲ್ಲಿ ಒಂದು ವರ್ಷದ ಬಾಹ್ಯಾಕಾಶ ಯಾನದಲಿ ೧೦೯೪೪ ಸೂರ್ಯಾಸ್ತ ಮತ್ತು ಸೂರ್ಯೋದಯಗಳನ್ನು ನೋಡಲಿದ್ದಾರೆ. ನೀವು ೬೮೪ ಬಾರಿ ನೋಡಲಿದ್ದೀರಿ" ಎಂದು ನಾಸಾ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com