ಕೊನೆಗೂ ಡಿಸ್‌ಲೈಕ್ ಸೇರಿಸಲು ಫೇಸ್‌ಬುಕ್ ಒಪ್ಪಿಗೆ
ವಾಷಿಂಗ್ಟನ್: ಫೇಸ್‌ಬುಕ್ ಬಳಕೆದಾರರ ಬಹು ಬೇಡಿಕೆಗಳಲ್ಲೊಂದಾದ ಡಿಸ್ ಲೈಕ್ ಆಪ್ಶನ್ ಗೆ ಇದೀಗ ಫೇಸ್‌ಬುಕ್ ಸಂಸ್ಥೆ ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲೇ ಫೇಸ್‌ಬುಕ್ ಜಾಲತಾಣದಲ್ಲಿ 'ಡಿಸ್‌ಲೈಕ್' ಆಪ್ಶನ್ ಬರಲಿದೆ ಎಂದು ಸಂಸ್ಥಾಪಕ ಮಾರ್ಕ್ ಜಕರ್‌ಬರ್ಗ್ ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ನಡೆದ ಕಾರ್ಯಕ್ರಮದ ಪ್ರಶ್ನೋತ್ತರ ಸೆಷನ್ ನಲ್ಲಿ ಮಾತನಾಡಿರುವ ಅವರು, ಫೇಸ್‌ಬುಕ್ ಬಳಕೆದಾರರು ಕಳುಹಿಸಿರುವ ಬೇಡಿಕೆಗಳಲ್ಲಿ ಬಹುತೇಕರು 'ಡಿಸ್‌ಲೈಕ್' ಆಪ್ಶನ್ ಕುರಿತಾಗಿ ಸಾಕಷ್ಟು ಮನವಿಗಳನ್ನು ಮಾಡಿದ್ದರು. ಬಳಕೆದಾರರ ಮನವಿಯನ್ನು ಇದೀಗ ಸಂಸ್ಥೆ ಸ್ವೀಕರಿಸಿದ್ದು, ಈ ಬಗ್ಗೆ ಸಂಸ್ಥೆ ಹಲವು ಪರೀಕ್ಷೆಗಳನ್ನು ನಡುಸುತ್ತದೆ. ಶೀಘ್ರದಲ್ಲೇ ಬಳಕೆದಾರರ ಬೇಡಿಕೆ ಈಡೇರಲಿದೆ ಎಂದು ಹೇಳಿದ್ದಾರೆ.
ಜನರು ಕೆಲವು ಬಾರಿ ಕೆಲವು ದುಖಃಕರ ವಿಚಾರ ಹಾಗೂ ನೋವಿನ ಸಂಗತಿಗಳನ್ನು ಹಂಚಿಕೊಂಡಿರುತ್ತಾರೆ ಈ ವೇಳೆ ಇಂತಹ ವಿಷಯಗಳಿಗೆ ಲೈಕ್ ಕೊಡುವುದು ಹಿತಕರವಲ್ಲ ಎಂಬ ಭಾವನೆಗಳು ಬಳಕೆದಾರರಲ್ಲಿ ಉಂಟುಮಾಡುತ್ತಿದೆ ಎಂದು ಹೇಳಿ ಸಾಕಷ್ಟು ಮನವಿಗಳು ಸಂಸ್ಥೆಗೆ ಬಂದಿತ್ತು. ಈ ಬಗ್ಗೆ ಸಂಸ್ಥೆ ಸಹ ಸಾಕಷ್ಟು ಬಾರಿ ಚರ್ಚೆ ನಡೆಸಿತ್ತು. ಇದೀಗ ಬಳಕೆದಾರರ ಬೇಡಿಕೆ ಕುರಿತಂತೆ ಸಂಸ್ಥೆ ಕೆಲಸ ಮಾಡುತ್ತಿದ್ದು, ಶೀಘ್ರದಲ್ಲೇ ಡಿಸ್ ಲೈಕ್ ಆಪ್ಶನ್ ನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ