ಫೇಸ್ ಬುಕ್ ನಿಂದ ಶೀಘ್ರವೇ ಪ್ರೊಫೈಲ್ ವಿಡಿಯೋ ಫೀಚರ್ ಬಿಡುಗಡೆ

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್, ಶೀಘ್ರವೇ ಪ್ರೊಫೈಲ್ ವಿಡಿಯೋ ಎಂಬ ಫೀಚರ್ ನ್ನು ಬಿಡುಗಡೆ ಮಾಡಲಿದೆ.
ಫೇಸ್ ಬುಕ್
ಫೇಸ್ ಬುಕ್

ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್, ಶೀಘ್ರವೇ ಪ್ರೊಫೈಲ್ ವಿಡಿಯೋ ಎಂಬ ಫೀಚರ್ ನ್ನು ಬಿಡುಗಡೆ ಮಾಡಲಿದೆ.
ಮೊಬೈಲ್ ಆಪ್ ನಲ್ಲಿ ಈ ಫೀಚರ್ ಲಭ್ಯವಾಗಲಿದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ.  ಫೇಸ್ ಬುಕ್ ನಲ್ಲಿ ವಿಡಿಯೋಗಳನ್ನು ಬಳಸುವ ಟ್ರೆಂಡ್ ಹೆಚ್ಚಾಗಿರುವುದರಿಂದ ಪ್ರೊಫೈಲ್ ವಿಡಿಯೋ ಎಂಬ ಫೀಚರ್ ನ್ನು ಬಿಡುಗಡೆ ಮಾಡಲು ಫೇಸ್ ಬುಕ್ ನಿರ್ಧರಿಸಿದೆ.
ಪ್ರೊಫೈಲ್ ವೀಕ್ಷಣೆಗೆ ನಿರ್ಬಂಧ ವಿಧಿಸಬಹುದಾದ ಸೌಲಭ್ಯ ಈಗಾಗಲೆ ಇದ್ದು, ಇದು ಪ್ರೊಫೈಲ್ ವಿಡಿಯೋಗೂ ಅನ್ವಯವಾಗಲಿದೆ. ವಿಡಿಯೋ ಅಪ್ ಡೇಟ್ ಮಾಡುವುದಕ್ಕೂ ಮುನ್ನ, ಬಳಕೆದಾರರ ಶಿಕ್ಷಣ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಮಾಹಿತಿ ಬರೆಯುವ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com