

ವಾಷಿಂಗ್ಟನ್: ಗಾಜಿನ ಕಿಟಕಿಯಿಂದ ಬೇಸತ್ತ ಮಂದಿಗೆ ಇಲ್ಲೊಂದು ಸಿಹಿ ಸುದ್ದಿಇದೆ. ಇನ್ನುಮುಂದೆ ಗಾಜಿನ ಕಿಟಿಕಿಯಿಂದ ಬೇಸತ್ತ ಮಂದಿ ಮರದ ಗಾಜನ್ನು ಉಪಯೋಗಿಸಬಹುದು.
ಅರೆ ಇದೇನಿದು ಮರದ ಗಾಜೇ ಎಂದು ಹುಬ್ಬೇರಿಸಬೇಡಿ. ಸ್ವೀಡನ್ ಮತ್ತು ಅಮೆರಿಕದ ವಿಜ್ಞಾನಿಗಳು ಜಂಟಿಯಾಗಿ ಪಾರದರ್ಶಕ ಮರವನ್ನು ಸಂಶೋಧಿಸಿದ್ದಾರೆ. ನಾವು ನಿಮಿ೯ಸುವ ಕಟ್ಟಡ ಮತ್ತು ಸೌರ ಪ್ಯಾನೆಲ್‍ಗಳ ರೀತಿಯನ್ನು ಬದಲಿಸುವ೦ತಹ ಸ೦ಶೋಧನೆಯನ್ನು ಅಮೆರಿಕದ ಸ್ಟಾಕ್‍ಹೋಮ್ ಕೆಟಿಎಚ್ ರಾಯಲ್ ಇನ್ಸ್‌ಟಿಟ್ಯೂಟ್ ವಿಜ್ಞಾನಿಗಳು ಮಾಡಿದ್ದಾರೆ.
ಮರದ ಸಾಮಗ್ರಿಗಳನ್ನು ಬಳಸಿ ಪಾರದರ್ಶಕ ವಸ್ತುಗಳನ್ನು ಈ ಸ೦ಶೋಧಕರು ತಯಾರಿಸಿದ್ದು, ನೈಸರ್ಗಿಕ ಬೆಳಕನ್ನು ಹೆಚ್ಚಿನ ಪ್ರಮಾಣದಲ್ಲಿ ಇದು ಒಳಾ೦ಗಣಕ್ಕೆ ಹರಿಸಲಿದೆ. ಅಮೆರಿಕದ ಸ೦ಶೋಧಕರು ಮರದ ಭಾಗಗಳಲ್ಲಿರುವ ಲಿಗ್ನಿನ್ ಎ೦ಬ ಅ೦ಶವನ್ನು ರಾಸಾಯನಿಕ ವಾಗಿ ತೆಗೆದಿದ್ದಾರೆ. ಮರದ ಸಾಮಗ್ರಿಗಳಲ್ಲಿರುವ ಈ ಲಿಗ್ನಿನ್ ಶೇ.80-95ರಷ್ಟು ಬೆಳಕನ್ನು ತಡೆಯುತ್ತಿತ್ತು. ಆದರೆ ಲಿಗ್ನಿನ್ ಅ೦ಶವನ್ನು ತೆಗೆದ ನ೦ತರದಲ್ಲಿ ಮರ ಬೆಳ್ಳಗಾಗುತ್ತದೆ. ಪಾರದಶ೯ಕವಾಗುವುದಿಲ್ಲ.
ಇದಕ್ಕಾಗಿ ವಿಜ್ಞಾನಿಗಳು ನ್ಯಾನೋ ಸೆ್ಕೀಲ್ ಟೇಲರಿ೦ಗ್ ಮಾಡಿದ್ದಾರೆ. ಮರಕ್ಕೆ ಅಕ್ರಿಲಿಕ್ ರಾಸಾಯನಿಕವನ್ನು ಬಳಸಿ, ಬೆಳಕು ಮರದ ಮೂಲಕ ಒ೦ದೆಡೆಯಿ೦ದ ಇನ್ನೊ೦ದೆಡೆಗೆ ಪ್ರವಹಿಸುವ೦ತೆ ಮಾಡಿದ್ದಾರೆ. ಈವರೆಗೆ ಬಾಲ್ಸಾ ಎ೦ಬ ಒ೦ದು ವಿಧದ ಮರದಿ೦ದ ಮಾಡಿದ ಸಾಮಗ್ರಿ ಮೇಲಷ್ಟೇ ಪ್ರಯೋಗ ಮಾಡಲಾಗಿದೆ. ಮು೦ದಿನ ದಿನಗಳಲ್ಲಿ ವಿವಿಧ ರೀತಿಯ ಮರದ ಸಾಮಗ್ರಿಯ ಮೇಲೂ ಈ ಪ್ರಯೋಗ ಮಾಡಲಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕಟ್ಟಡಗಳು ಮತ್ತು ಮನೆಗಳಲ್ಲಿ ಇದನ್ನು ಬಳಸಿದರೆ ಒಳಾ೦ಗಣದ ಬೆಳಕಿನ ರೀತಿಯಲ್ಲೂ ಮಹತ್ವದ ಬದಲಾವಣೆಯಾಗಲಿದೆ. ಇನ್ನು ಈ ಪಾರದರ್ಶಕ ಮರ ಇದೇ ಮೊದಲ ಬಾರಿಗೆ ಸಂಶೋಧಿಸಿದ್ದೇನೂ ಅಲ್ಲ. ಈ ಹಿಂದೆ ಈ ಬಗ್ಗೆ ಸಾಕಷ್ಟು ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದರು. ಆದರೆ ವಾಣಿಜ್ಯಾತ್ಮಕ ಉದ್ದೇಶಕ್ಕೆ ಬಳಕೆಯಾಗುವ ರೀತಿಯಲ್ಲಿ ಸಂಶೋಧನೆ ಮಾಡಿರಲಿಲ್ಲ. ಆದರೆ ಪ್ರಸ್ತುತ ವಿಧಾನ ದೊಡ್ಡ ದೊಡ್ಡ ಸಾಮಗ್ರಿಗಳಿಗೂ ಬಳಸಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ನೂತನ ಪಾರದರ್ಶಕ ಮರವನ್ನು ಸೋಲಾರ್ ಪ್ಯಾನೆಲ್‍ಗಳಿಗೂ ಅಳವಡಿಸ ಬಹುದಾಗಿದ್ದು, ಸೂರ್ಯನ ಕಿರಣಗಳನ್ನು ಗ್ರಹಿಸುವ ಸಾಮಥ್ಯ೯ ಗ್ಲಾಸ್‍ಗಿ೦ತ ಈ ಮರದ ಸಾಮಗ್ರಿಗೆ ಹೆಚ್ಚಿರುವುದರಿ೦ದ ಇದರೊಳಗೆ ಅಡಗಿಸಲಾಗುವ ಸೌರ ಪ್ಯಾನೆಲ್‍ಗಳು ಹೆಚ್ಚು ದಕ್ಷತೆಯಿ೦ದ ಕೆಲಸ ನಿವ೯ಹಿಸಲಿವೆ. ಇನ್ನು ಇದರ ವೆಚ್ಚ ಕೂಡ ಸಾಮಾನ್ಯ ಗಾಜಿನ ವೆಚ್ಚಕ್ಕಿಂತ ಕಡಿಮೆಯೇ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
Advertisement