ತಾಲಿಬಾನ್ ನಿರ್ಮಿತ ಆಪ್ ತೆಗೆದುಹಾಕಿರುವುದನ್ನು ಖಚಿತಪಡಿಸಿದ ಗೂಗಲ್
ನ್ಯೂಯಾರ್ಕ್: ತಾಲಿಬಾನ್ ನಿರ್ಮಿಸಿದ್ದ ಆಪ್ ನ್ನು ಪ್ಲೇ ಸ್ಟೋರ್ ನಿಂದ ತೆಗೆದುಹಾಕಿರುವುದನ್ನು ಸರ್ಚ್ ಇಂಜಿನ್ ಸಂಸ್ಥೆ ಗೂಗಲ್ ಖಚಿತಪಡಿಸಿದೆ.
ಕಳೆದ ವಾರ ತಾಲಿಬಾನ್ ನಿರ್ಮಿತ ಆಪ್ ಒಂದನ್ನು ಪ್ಲೇ ಸ್ಟೋರ್ ನಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್ ನ ವಕ್ತಾರ ತಾಲಿಬಾನ್ ನಿರ್ಮಿತ ಆಪ್ ನ್ನು ತೆಗೆದು ಹಾಕಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಆಪ್ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ.
ಕೆಲವೊಂದು ಆಪ್ ಗಳ ಬಗ್ಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ, ನಮ್ಮ ಗ್ರಾಹಕರು ಹಾಗೂ ಡೆವಲಪರ್ ಗಳಿಗೆ ಉತ್ತಮವಾದ ಸೌಲಭ್ಯ ನೀಡುವುದಕ್ಕೆ ಪೂರಕವಾಗಿ ಗೂಗಲ್ ನ ನಿಯಮಗಳು ರೂಪುಗೊಂಡಿದೆ. ನಿಯಮಗಳನ್ನು ಉಲ್ಲಂಘಿಸುವ ಆಪ್ ಗಳನ್ನು ಗೂಗಲ್ ಪ್ಲೇಯಿಂದ ತೆಗೆದುಹಾಕುತ್ತೇವೆ ಪ್ರಚೋದನಕಾರಿ ಭಾಷಣ, ಹಿಂಸೆ, ಅಕ್ರಮ ಚಟುವಟಿಕೆಗಳನ್ನು ಉತ್ತೇಜಿಸುವ ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ನಿಷೇಧಿಸಲಾಗಿದೆ ಎಂದು ಗೂಗಲ್ ತಿಳಿಸಿದೆ.
ಆನ್ ಲೈನ್ ನಲ್ಲಿ ಭಯೋತ್ಪಾದಕ ಚಟುವಟಿಕೆಗಳ ಜಾಡನ್ನು ಕಂಡುಹಿಡಿಯುವ ಎಸ್ ಐಟಿಇ ಗೂಗಲ್ ಪ್ಲೇ ಸ್ಟೋರ್ ನಲ್ಲಿ ತಾಲಿಬಾನ್ ನಿರ್ಮಿತ ಆಪ್ ಇರುವುದರ ಬಗ್ಗೆ ಮಾಹಿತಿ ನೀಡಿತ್ತು. ಎಚ್ಚೆತ್ತ ಗೂಗಲ್ ಸಂಸ್ಥೆ ಆಪ್ ನ್ನು ತೆಗೆದು ಹಾಕಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ