ಫೇಸ್ ಬುಕ್ ನಲ್ಲಿ ಐವರಲ್ಲಿ ಒಬ್ಬರು ಮಾತ್ರ ತಮ್ಮ ಬಗ್ಗೆ ಸತ್ಯ ಹೇಳುತ್ತಾರೆ: ಅಧ್ಯಯನ ವರದಿ

ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ನೈಜತೆಯನ್ನು ಫೇಸ್ ಬುಕ್, ಟ್ವಿಟರ್ ಗಳಲ್ಲಿ ಬಹಿರಂಗಪಡಿಸುವುದಿಲ್ಲ ಎಂದು ಯುಕೆ ಮೂಲದ ಅಧ್ಯಯನ ವರದಿಯೊಂದು ತಿಳಿಸಿದೆ.
ಫೇಸ್ ಬುಕ್ ನಲ್ಲಿ ಐವರಲ್ಲಿ ಒಬ್ಬರು ಮಾತ್ರ ತಮ್ಮ ಬಗ್ಗೆ ಸತ್ಯ ಹೇಳುತ್ತಾರೆ: ಅಧ್ಯಯನ ವರದಿ

ಲಂಡನ್: ಸಾಮಾಜಿಕ ಜಾಲತಾಣದ ಬಳಕೆದಾರರು ತಮ್ಮ ನೈಜತೆಯನ್ನು ಫೇಸ್ ಬುಕ್, ಟ್ವಿಟರ್ ಗಳಲ್ಲಿ ಬಹಿರಂಗಪಡಿಸುವುದಿಲ್ಲ ಎಂದು ಯುಕೆ ಮೂಲದ ಅಧ್ಯಯನ ವರದಿಯೊಂದು ತಿಳಿಸಿದೆ.
ಸಮೀಕ್ಷೆಯ ಪ್ರಕಾರ 2 ,000 ಬ್ರಿಟನನ್ನರ ಪೈಕಿ ಶೇ.18 ರಷ್ಟು ಜನರು ಮಾತ್ರ ನೈಜ ಜೀವನದಲ್ಲಿ ಇರುವಂತೆಯೇ ಸಾಮಾಜಿಕ ಜಾಲತಾಣಗಳಲ್ಲಿಯೂ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. ಆದರೆ ಬಹುತೇಕ ಬಳಕೆದಾರರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಇತರರನ್ನು ಆಕರ್ಷಿಸುವಂತೆ ತಮ್ಮನ್ನು ಬಿಂಬಿಸಿಕೊಳ್ಳುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ. 
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬಗ್ಗೆ ಸುಳ್ಳು ಹೇಳುವ ವಿಷಯದಲ್ಲಿ ಪುರುಷರು ಮಹಿಳೆಯರನ್ನು ಹಿಂದಿಕ್ಕಿದ್ದಾರೆ. ಇತರರನ್ನು ಆಕರ್ಷಿಸುವ ಭರದಲ್ಲಿ  ಪುರುಷರು ಮಹಿಳೆಯರಿಗಿಂತ ಹೆಚ್ಚು ಸುಳ್ಳು ಹೇಳುತ್ತಾರೆ ಎಂಬುದೂ ಅಧ್ಯಯನ ವರದಿಯಿಂದ ತಿಳಿದುಬಂದಿದೆ. ತಮ್ಮ ಪ್ರೊಫೈಲ್ ಚಿತ್ರಕ್ಕೂ ತಮ್ಮ ನೈಜ ಜೀವನಕ್ಕೂ ಹೆಚ್ಚು ಅಂತರ ಇರುವುದಾಗಿ ಶೇ.43 ರಷ್ಟು ಪುರುಷರು ಒಪ್ಪಿಕೊಂಡಿದ್ದಾರೆ. ನೈಜತೆಗಿಂತ ಹೆಚ್ಚು ಸಾಮಾಜಿಕ ಜೀವನದಲ್ಲಿ ತಾವು ಸಕ್ರಿಯರಾಗಿದ್ದೀವಿ ಎಂಬಂತೆ ಬಿಂಬಿಸಿಕೊಳ್ಳುವ ರೀತಿಯಲ್ಲಿ ಪ್ರೊಫೈಲ್ ಹೊಂದಿರುವುದಾಗಿ  ಶೇ.14 ರಷ್ಟು ಜನರು ತಿಳಿಸಿದ್ದಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com