ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲಿರುವ ನಾಸಾ

ಮಹತ್ವಾಕಾಂಕ್ಷಿ ಯೋಜನೆಯೊಂದನೆಯೊಂದನ್ನು ಕೈಗೆತ್ತಿಕೊಂಡಿರುವ ನಾಸಾ ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲು ಮುಂದಾಗಿದೆ.
ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲಿರುವ ನಾಸಾ
ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲಿರುವ ನಾಸಾ

ವಾಷಿಂಗ್ ಟನ್: ಮಹತ್ವಾಕಾಂಕ್ಷಿ ಯೋಜನೆಯೊಂದನೆಯೊಂದನ್ನು ಕೈಗೆತ್ತಿಕೊಂಡಿರುವ ನಾಸಾ ಶನಿ ಗ್ರಹದ ಹಿಮಾವೃತ ಚಂದ್ರನ ಮೇಲೆ ಜೀವಿಗಳ ಅಸ್ತಿತ್ವವನ್ನು ಶೋಧಿಸಲು ಮುಂದಾಗಿದೆ.

ಶನಿ ಹಾಗೂ ಗುರು ಗ್ರಹಗಳಿಗಿರುವ ಹಿಮಾವೃತ ಚಂದ್ರರ ಕೆಳಮೇಲ್ಮೈ(ಕೆಳಭಾಗ) ದಲ್ಲಿರುವ ಸಮುದ್ರಗಳು ಜೀವಿಗಳ ಅಸ್ತಿತ್ವಕ್ಕೆ ಪೂರಕವಾಗಿರುವ ಸಾಧ್ಯತೆಗಳನ್ನು ನಿರೀಕ್ಷಿಸಿ ಶನಿ, ಗುರು ಗ್ರಹಗಳ ಉಪಗ್ರಹ (ಚಂದ್ರನ)ಗಳಿಗೆ ರೋಬೋಟ್ ಗಳನ್ನು ಕಳಿಸುವ ಪ್ರಸ್ತಾವನೆಯನ್ನು ಪರಿಗಣಿಸಿದೆ. ನಾಸಾದ ಇತ್ತೀಚಿನ ಅಧ್ಯಯನದ ಪ್ರಕಾರ, ಗುರು ಗ್ರಹದ ಉಪಗ್ರಹ(ಚಂದ್ರ) ಯುರೋಪಾ, ಅತಿ ಹೆಚ್ಚು ಗುರುತ್ವಾಕರ್ಷಣೆ ಉಂಟು ಮಾಡುತ್ತಿದ್ದು ಇದರಿಂದ ಉಪಗ್ರಹಗಳ ಮೇಲಿನ ಹಿಮ ಪರದೆ ಮೇಲೆ ಉಷ್ಣತೆ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ.

ಗುರು ಗ್ರಹಕ್ಕಿಂತ ಶನಿ ಗ್ರಹದ ಉಪಗ್ರಹದದಲ್ಲಿ ಜೀವಿಗಳ ಅಸ್ತಿತ್ವ ಇದೆ ಎಂದು ಕ್ಯಾಲಿಫೋರ್ನಿಯಾದ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ ಸಂಶೋಧಕರು ಅಂದಾಜಿಸಿದ್ದು ಹೆಚ್ಚಿನ ಸಂಶೋಧನೆಗೆ ಹಿಮಾವೃತ ಉಪಗ್ರಹಗಳಿಗೆ ರೋಬೋಟ್ ಗಳನ್ನು ಕಳಿಸುವ ಪ್ರಸ್ತಾವನೆಯನ್ನು ನಾಸಾಗೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com