ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ ಯಶಸ್ವಿ

ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಯನ್ನು ಗುರುವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದೆ..
ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ (ಸಂಗ್ರಹ ಚಿತ್ರ)
ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ (ಸಂಗ್ರಹ ಚಿತ್ರ)

ಶ್ರೀಹರಿಕೋಟಾ: ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಯನ್ನು ಗುರುವಾರ ಮಧ್ಯಾಹ್ನ  ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದೆ.

ಗುರುವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷಿ ಯೋಜನೆ ಐಆರ್​ಎನ್​ಎಸ್​ಎಸ್-1ಜಿ ಯನ್ನು  ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಸುಮಾರು 1,425 ಕೆ.ಜಿ. ತೂಕದ ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹವನ್ನು ಪಿಎಸ್​ಎಲ್​ವಿ-ಸಿ33 ರಾಕೆಟ್ ಮೂಲಕವಾಗಿ ಯಶಸ್ವಿಯಾಗಿ  ಅಂತರಿಕ್ಷಕ್ಕೆ ರವಾನಿಸಲಾಗಿದೆ. ಅಂತೆಯೇ ಉಪಗ್ರಹ ಯಶಸ್ವಿಯಾಗಿ ಕಕ್ಷೆ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ತನ್ನ ಕಾರ್ಯಾರಂಭ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಸ್ತುತ ಉಡಾವಣೆಯಾಗಿರುವ ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹ ಈಗಾಗಲೇ ಉಡಾಯಿಸಲಾಗಿರುವ ಐಆರ್​ಎನ್​ಎಸ್​ಎಸ್ 1ಎ, 1ಬಿ, 1ಸಿ, 1ಡಿ, 1ಇ ಮತ್ತು 1ಎಫ್  ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಭಾರತದಾದ್ಯಂತ ಪ್ರಾದೇಶಿಕ ಸಂಚಾರ ಮಾರ್ಗಸೂಚಿಗೆ ತಂತ್ರಜ್ಞಾನ ಸಹಕಾರವನ್ನು ನೀಡಲಿದೆ. ಈ ಹಿಂದೆ ಐಆರ್​ಎನ್​ಎಸ್​ಎಸ್ 1ಎ  ಉಪಗ್ರಹವನ್ನು 2013ರ ಜುಲೈ 1ರಂದು, 1ಬಿಯನ್ನು 2014ರ ಏಪ್ರಿಲ್ 4ರಂದು, 1ಸಿ ಉಪಗ್ರಹವನ್ನು 2014ರ ಅಕ್ಟೋಬರ್ 16 ರಂದು, 1 ಡಿ ಉಪಗ್ರಹವನ್ನು 2015ರ ಮಾರ್ಚ್ 28ರಂದು ಹಾಗೂ  1ಇ ಉಪಗ್ರಹವನ್ನು ಜನವರಿ 20ರಂದು ಮತ್ತು ಮಾರ್ಚ್ 10ರಂದು 1 ಎಫ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು.

ಉಪಗ್ರಹ ಉಡಾವಣೆಗೆ ಸಾಕ್ಷಿಯಾದ ಪ್ರಧಾನಿ ಮೋದಿ
ಇನ್ನು ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾದರು. ಉಪಗ್ರಹ ಉಡಾವಣೆಯನ್ನು ವೀಕ್ಷಿಸಿ ಮೋದಿ ಯೋಜನೆಯ ಯಶಸ್ಸಿಗೆ  ಕಾರಣಕರ್ತರಾದ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com