
ನ್ಯೂಯಾರ್ಕ್: ಪ್ರಸಿದ್ದ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮಾಲೀಕತ್ವದ ಮೊಬೈಲ್ ಸಂದೇಶ ಸೇವೆ ನೀಡುವ ವಾಟ್ಸ್ಆಪ್ ಈಗ 1 ಶತಕೋಟಿ ಬಳಕೆದಾರರನ್ನು ಹೊಂದಿದೆ ಎಂದು ಸಿಇಒ ಮಾರ್ಕ್ ಜುಗರ್ಬರ್ಗ್ ಮಂಗಳವಾರ ಪ್ರಕಟಿಸಿದರು.
ಪ್ರತಿದಿನ 4200 ಕೋಟಿ ಸಂದೇಶಗಳು ವಾಟ್ಸ್ಆಪ್ನಲ್ಲಿ ವಿನಿಮಯವಾಗುತ್ತಿದ್ದು, 100 ಕೋಟಿ ಜನರು ಈಗ ವಾಟ್ಸ್ ಆಪ್ನನ್ನು ಬಳಸುತ್ತಿದ್ದಾರೆ. ಶತಕೋಟಿ ಜನರನ್ನು ಸಂರ್ಪಸುವ ಕೆಲವೇ ಕೆಲವು ಸೇವೆಗಳಿವೆ. ಇಡೀ ಜಗತ್ತನ್ನು ಪರಸ್ಪರ ಸಂರ್ಪಸುವ ನಿಟ್ಟಿನಲ್ಲಿ ಇದು ಅತ್ಯಂತ ಮಹತ್ವದ ಮೈಲುಗಲ್ಲು ಎಂದು ಅವರು ಫೇಸ್‌ಬುಕ್ ನಲ್ಲಿ ಬರೆದಿದ್ದಾರೆ.
ಪ್ರತಿದಿನ ವಾಟ್ಸ್ ಆಪ್ನಲ್ಲಿ 160 ಕೋಟಿ ಫೋಟೋಗಳು ಮತ್ತು 2500 ಲಕ್ಷ ವಿಡಿಯೋಗಳು 53 ಭಾಷೆಗಳಲ್ಲಿ ವಿನಿಮಯಗೊಳ್ಳುತ್ತಿವೆ ಎಂದು ಮಾರ್ಕ್ ಜುಗರ್ಬರ್ಗ್ ಹೇಳಿದ್ದಾರೆ.
Advertisement