ಸ್ಟೆಥಸ್ಕೋಪ್ ಸಂಶೋಧಕ ರೆನೆ ಲೆನೆಕ್ ನೆನಪಿನಲ್ಲಿ ಗೂಗಲ್ ಡೂಡಲ್

ವೈದ್ಯಕೀಯ ರಂಗದಲ್ಲಿ ಮಹತ್ವದ ಆವಿಷ್ಕಾರವಾದ ಸ್ಟೆಥಸ್ಕೋಪ್ ಅನ್ನು ಸ್ಮಾರ್ಟ್ ಉಪಕರಣಗಳಿಂದ ಬದಲಿಸಬೇಕು ಎಂಬ ಚರ್ಚೆ-ವಾದ ಸಂಶೋಧಕರ ನಡುವೆ ದಟ್ಟವಾಗಿರುವ
ಸ್ಟೆಥಸ್ಕೋಪ್ ಸಂಶೋಧಕ ರೆನೆ ಲೆನೆಕ್ ನೆನಪಿನಲ್ಲಿ ಗೂಗಲ್ ಡೂಡಲ್
ಸ್ಟೆಥಸ್ಕೋಪ್ ಸಂಶೋಧಕ ರೆನೆ ಲೆನೆಕ್ ನೆನಪಿನಲ್ಲಿ ಗೂಗಲ್ ಡೂಡಲ್
Updated on

ನವದೆಹಲಿ: ವೈದ್ಯಕೀಯ ರಂಗದಲ್ಲಿ ಮಹತ್ವದ ಆವಿಷ್ಕಾರವಾದ ಸ್ಟೆಥಸ್ಕೋಪ್ ಅನ್ನು ಸ್ಮಾರ್ಟ್ ಉಪಕರಣಗಳಿಂದ ಬದಲಿಸಬೇಕು ಎಂಬ ಚರ್ಚೆ-ವಾದ ಸಂಶೋಧಕರ ನಡುವೆ ದಟ್ಟವಾಗಿರುವ ಸಮಯದಲ್ಲಿ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್,  ಸ್ಟೆಥಸ್ಕೋಪ್ ಸಂಶೋಧಕ ರೆನೆ ಲೆನೆಕ್ ಅವರ ೨೫೩ನೆ ಜನ್ಮ ದಿನದ ನೆನಪಿನಲ್ಲಿ ಡೂಡಲ್ ಬಿಡಿಸಿದೆ.

ಈ ಫ್ರೆಂಚ್ ವೈದ್ಯ ಸ್ಟೆಥಸ್ಕೋಪ್ ಕಂಡು ಹಿಡಿಯುವುದಕ್ಕೂ ಮೊದಲಿಗೆ ರೋಗಿಗಳ ಎದೆಯ ಮೇಲೆ ಅಥವಾ ಕೈಮೇಲೆ ಕಿವಿಯನ್ನಿಟ್ಟು, ಆರೋಗ್ಯದ ಲೋಪದೋಷಗಳನ್ನು ಪತ್ತೆಹಚ್ಚಲಾಗುತ್ತಿತ್ತು.

೧೮೧೬ರಲ್ಲಿ ಅತಿತೂಕದ ಮಹಿಳೆಯರೊಬ್ಬರ ಹೃದಯಬಡಿತವನ್ನು ಪರೀಕ್ಷಿಸುವಾಗ ರೆನೆ, ಮಹಿಳೆಯ ಎದೆಯ ಮೇಲೆ ಕಿವಿಯಿಡುವುದಕ್ಕಿಂತಲೂ ಉತ್ತಮ ವಿಧಾನವನ್ನು ಈ ಸರಳ ಉಪಕರಣದ ಮೂಲಕ ತೋರಿಸಿದರಂತೆ!

ಇಬ್ಬರು ಮಕ್ಕಳು ಉದ್ದನೆಯ ಕಡ್ಡಿಯೊಂದನ್ನು ಹಿಡಿದು ಒಂದು ಬದಿಯಿಂದ ಇನ್ನೊಂದು ಬದಿಗೆ ಸಂವಹನ ಮಾಡುತ್ತಿದ್ದರಿಂದ ಉತ್ತೇಜನ ಪಡೆದ ರೆನೆ ಕಾದಗವೊಂದನ್ನು ಸುರಳಿ ಸುತ್ತಿ ರೋಗಿಯೇ ಎದೆಗೆ ಹಿಡಿದರಂತೆ. ಹೃದಯ ಬಡಿತ ನಿಚ್ಚಳವಾಗಿ ಕೇಳಿಸಿ, ಸ್ಟೆಥಸ್ಕೋಪಿನ ಮೊದಲ ಆವೃತ್ತಿ ಅನ್ವೇಷಣೆಯಾಯಿತು! ಈ ಆವಿಷ್ಕಾರ ರೋಗಿಗಳ ಪರೀಕ್ಷೆಯ ದಿಕ್ಕನ್ನೇ ಬದಲಿಸಿದ್ದು ಇತಿಹಾಸ.

ನಂತರದ ಆವಿಷ್ಕಾರಗಳಲ್ಲಿ ಟ್ಯೂಬ್ ಉಳ್ಳ ಸ್ಟೆಥಸ್ಕೋಪ್ ಬಳಕೆಗೆ ಬಂದಿದ್ದು, ಗೂಗಲ್ ನ ಡೂಡಲ್ ಮೊದಲ ಆವಿಷ್ಕಾರ ಮತ್ತು ಹೊಸ ಸ್ಟೆಥಸ್ಕೋಪ್ ಎರಡನ್ನೂ ಚಿತ್ರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com