ಫ್ಲೂಟೋದ ಚಂದ್ರ ಚಾರೋನ್​ನಲ್ಲಿ ಪ್ರಾಚೀನ ಸಾಗರ ಪತ್ತೆ ಹಚ್ಚಿದ ನಾಸಾ!

ಪ್ಲೂಟೋದ ದೊಡ್ಡ ಉಪಗ್ರಹವಾದ (ಚಂದ್ರ) ಚಾರೋನ್​ನಲ್ಲಿ ಒಂದು ಕಾಲದಲ್ಲಿ ಬೃಹತ್ ಸಾಗರ ಇದ್ದಿರಬಹುದಾದ ಸಾಧ್ಯತೆ ಗೋಚರಿಸಿದೆ ಎಂದು ನಾಸಾ ವಿಜ್ಞಾನಿಗಳು...
ಪ್ಲೂಟೋ
ಪ್ಲೂಟೋ

ವಾಷಿಂಗ್ಟನ್: ಪ್ಲೂಟೋದ ದೊಡ್ಡ ಉಪಗ್ರಹವಾದ (ಚಂದ್ರ) ಚಾರೋನ್​ನಲ್ಲಿ ಒಂದು ಕಾಲದಲ್ಲಿ ಬೃಹತ್ ಸಾಗರ ಇದ್ದಿರಬಹುದಾದ ಸಾಧ್ಯತೆ ಗೋಚರಿಸಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ನಾಸಾದ ನ್ಯೂ ಹಾರಿಜನ್ಸ್ ಬಾಹ್ಯಾಕಾಶ ನೌಕೆಯು 2015ರ ಜುಲೈ ತಿಂಗಳಲ್ಲಿ ಈ ಪ್ರದೇಶದ ಮೇಲೆ ಹಾದು ಹೋಗುವಾಗ ತೆಗೆದಿದ್ದ ಚಿತ್ರದ ವಿಶ್ಲೇಷಣೆ ಮಾಡಿರುವ ವಿಜ್ಞಾನಿಗಳು  ಚಾರೋನ್ ನಲ್ಲಿ ಬೃಹತ್ ಸಾಗರ ಇದ್ದಿರಬಹುದು. ಪ್ರಸ್ತುತ ಈ ಸಾಗರ ಹೆಪ್ಪುಗಟ್ಟಿದ್ದು ಭಾರಿ ಪ್ರಮಾಣದಲ್ಲಿ ಹಿಗ್ಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಉಪಗ್ರಹದ ಹೊರ ಮೇಲ್ಮೈಯು ವಿಕಿರಣಗಳು ಮತ್ತು ಉಪಗ್ರದೊಳಗಿನ ಶಾಖದ ಪರಿಣಾಮವಾಗಿ ಬಿಸಿಯಾಗಿ ನೀರಾಗಿ ಪರಿವರ್ತನೆಗೊಂಡು ಮೇಲ್ಮೈಯಲ್ಲಿ ಬೃಹತ್ ಸಾಗರ ಸೃಷ್ಟಿಯಾಗಿರಬಹುದು. ಆದರೆ ಕ್ರಮೇಣ ಚಾರೋನ್​ನ ಶಾಖ ಕಡಿಮೆಯಾಗುತ್ತಾ ಹೋದಂತೆ ಸಾಗರ ಹೆಪ್ಪುಗಟ್ಟಿರಬಹುದು ಮತ್ತು ಹಿಗ್ಗಿರಬಹುದು(ನೀರು ಹೆಪ್ಪುಗಟ್ಟಿದಾಗ ಹಿಗ್ಗುವುದು ಸಹಜ ಗುಣ). ಹೀಗಾಗಿ ಈ ಉಪಗ್ರಹ ಈಗ ಭಾರಿ ಪ್ರಮಾಣದಲ್ಲಿ ಹಿಗ್ಗಿದಂತೆ ಕಾಣುತ್ತದೆ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com