

ಲಂಡನ್: ಫೇಸ್ ಬುಕ್ ನಲ್ಲಿ ಯಾರಾದರೂ ತನೆಗೆ 1,000 ಸ್ನೇಹಿತರಿದ್ದಾರೆ ಎಂದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ. ಹೇಗೆ ಅಂತೀರಾ? ಹೊಸ ಸಂಶೋಧನಾ ವರದಿ ಪ್ರಕಾರ ಫೇಸ್ ಬುಕ್ ನಲ್ಲಿ 200 ಕ್ಕಿಂತ ಹೆಚ್ಚು ನಿಜವಾದ ಆಪ್ತ ಸ್ನೇಹಿತರು ಇರುವುದಕ್ಕೆ ಸಾಧ್ಯವಿಲ್ಲವಂತೆ.
ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಪ್ರಾಧ್ಯಾಪಕ ರಾಬಿನ್ ಡನ್ಬಾರ್ ಈ ಬಗ್ಗೆ ಎರಡು ಸಮೀಕ್ಷೆ ನಡೆಸಿದ್ದು, ನಿರಂತರವಾಗಿ ಫೇಸ್ ಬುಕ್ ಬಳಕೆ ಮಾಡುವವರಿಗೆ ಇರುವ ನಿಜವಾದ ಆಪ್ತ ಸ್ನೇಹಿತರು( ವಯಕ್ತಿಕವಾಗಿ ಗುರುತಿರುವವರ) ಸಂಖ್ಯೆ ಕೇವಲ 155 ಆಗಿತ್ತು. ಎರಡನೇ ಸಮೀಕ್ಷೆಯಲ್ಲಿ ಈ ಸಂಖ್ಯೆ 183 ಕ್ಕೆ ತಲುಪಿದ್ದು ಓರ್ವ ವ್ಯಕ್ತಿಯ ಸ್ನೇಹಿತರ ಪಟ್ಟಿಯಲ್ಲಿ ಚೆನ್ನಾಗಿ ಪರಿಚಯವಿರುವವರ ಸಂಖ್ಯೆ 200 ದಾಟುವುದಿಲ್ಲ ಎಂದು ತಿಳಿದುಬಂದಿದೆ.
ಮಹಿಳೆಯರು ತಮಗೆ ಗುರುತಿರುವವರ ಸ್ನೇಹಿತರನ್ನು ಹೊಂದಿರುವುದರಲ್ಲಿ ಪುರುಷರಿಗಿಂತ ಮುಂದಿದ್ದಾರೆ. ಡನ್ಬಾರ್ ಪ್ರಕಾರ ಸ್ನೇಹಿತರನ್ನು ಮುಖಃ ಭೇಟಿ ಮಾಡದೆ ಇದ್ದರೆ ಸ್ನೇಹ ಸಂಬಂಧಗಳು ಹೆಚ್ಚು ದಿನ ಉಳಿಯುವುದಿಲ್ಲವಂತೆ. ಆದ್ದರಿಂದ ಮುಖತಃ ಪರಿಚಯವಿರುವ ಸ್ನೇಹಿತರ ಪಟ್ಟಿ 200 ನ್ನು ದಾಟುವುದಿಲ್ಲ ಎಂದು ಸಮೀಕ್ಷೆ ಆಧಾರಿತ ಸಂಶೋಧನೆ ಹೇಳಿದೆ.
Advertisement