ಸೌರಮಂಡಲದಲ್ಲಿ ಹೊಸ ಗ್ರಹ ಪತ್ತೆ; ಅಧಿಕೃತ ಘೋಷಣೆ ಬಾಕಿ

ಭೂಮಿಗಿಂತ ಸುಮಾರು 10 ಪಟ್ಟು ದೊಡ್ಡದಾದ ಹೊಸ ಗ್ರಹವೊಂದು ಸೌರಮಂಡಲದಲ್ಲಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ...
ರಹಸ್ಯ ಗ್ರಹ ಪತ್ತೆ (ಸಂಗ್ರಹ ಚಿತ್ರ)
ರಹಸ್ಯ ಗ್ರಹ ಪತ್ತೆ (ಸಂಗ್ರಹ ಚಿತ್ರ)

ಕ್ಯಾಲಿಫೋರ್ನಿಯಾ: ಭೂಮಿಗಿಂತ ಸುಮಾರು 10 ಪಟ್ಟು ದೊಡ್ಡದಾದ ಹೊಸ ಗ್ರಹವೊಂದು ಸೌರಮಂಡಲದಲ್ಲಿ ಪತ್ತೆಯಾಗಿದೆ ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ.

ಸೌರಮಂಡಲದಲ್ಲಿ ಪ್ರಸ್ತುತ ಅತ್ಯಂತ ದೂರದಲ್ಲಿರುವ ಗ್ರಹ ಎಂದರೆ ನೆಪ್ಚೂನ್. ಆದರೆ ಇದಕ್ಕಿಂತಲೂ ದೂರವಿರುವ ಮತ್ತು ಆಕಾರದಲ್ಲಿ ಭೂಮಿಗಿಂತ 10ಪಟ್ಟು ದೊಡ್ಡದಾದ ರಹಸ್ಯ ಮತ್ತು  ವಿಚಿತ್ರ ಗ್ರಹವೊಂದನ್ನು ಅಮೆರಿಕದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ನೆಫ್ಚೂನ್‌, ಸೂರ್ಯನ ನಡುವೆ ಇರುವ ಅಂತರಕ್ಕಿಂತ ಸರಾಸರಿ 20 ಪಟ್ಟು ದೂರದಲ್ಲಿ ಈ ಹೊಸ ಗ್ರಹ ಪತ್ತೆಯಾಗಿದೆ.  ಇದಕ್ಕೆ ಸದ್ಯ 'ಪ್ಲಾನೆಟ್‌ ನೈನ್‌' (9ನೇ ಗ್ರಹ) ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಗ್ರಹ ಸೌರಮಂಡಲದಲ್ಲೇ ಇದ್ದು, ಇಷ್ಟು ದಿನ ವಿಜ್ಞಾನಿಗಳಿಗೆ ಗೋಚರಿಸದೇ ಇದ್ದದ್ದು ಹೇಗೆ  ಎಂಬುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

ಈ ಬೃಹತ್ ಗ್ರಹ ಸೂರ್ಯನನ್ನು ಒಂದು ಸುತ್ತು ಹಾಕಲು ಬರೋಬ್ಬರಿ 20 ವರ್ಷಗಳಷ್ಟು ಸುದೀರ್ಘ‌ ಅವಧಿ ತೆಗೆದುಕೊಳ್ಳುತ್ತದೆಯಂತೆ. ಸೌರಮಂಡಲದಲ್ಲಿ ಈಗಾಗಲೇ ಇರುವ 8 ಗ್ರಹಗಳ  ಸಾಲಿಗೆ ಒಂಬತ್ತನೆಯದಾಗಿ ಈ ಗ್ರಹ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ಸೂರ್ಯನಿಗೆ ಒಂದು ಸುತ್ತು ಹಾಕಿ ಬರಲು ಭೂಮಿ 365 ದಿನಗಳನ್ನು ತೆಗೆದುಕೊಂಡರೆ, 'ಪ್ಲಾನೆಟ್‌ ನೈನ್‌' 10ರಿಂದ 20 ವರ್ಷಗಳಷ್ಟು ಸುದೀರ್ಘ‌ ಅವಧಿ ತೆಗೆದುಕೊಳ್ಳುತ್ತದೆ. ಇದು ಅತ್ಯಂತ  ಸುದೀರ್ಘ‌ ಹಾದಿಯಾಗಿದೆ ಎಂದು ನೂತನ ಗ್ರಹ ಪತ್ತೆಹಚ್ಚಿರುವ ಕ್ಯಾಲಿಫೋರ್ನಿಯಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಕಾನ್‌ಸ್ಟಾಂಟಿನ್‌ ಬಾಟಿಗಿನ್‌ ಹಾಗೂ ಮೈಕ್‌ ಬ್ರೌನ್‌  ತಿಳಿಸಿದ್ದಾರೆ.

ವಿಚಿತ್ರವೆಂದರೆ 9ನೇ ಗ್ರಹವನ್ನು ಪತ್ತೆ ಹಚ್ಚಿರುವ ಈ ಸಂಶೋಧಕರಿಬ್ಬರೂ 'ಪ್ಲಾನೆಟ್‌ ನೈನ್‌' ಅನ್ನು ನೇರವಾಗಿ ವೀಕ್ಷಿಸಿಲ್ಲ. ಬದಲಿಗೆ ಗಣಿತ ಮಾದರಿ ಹಾಗೂ ಕಂಪ್ಯೂಟರ್‌ ಸಿಮ್ಯುಲೇಷನ್‌  ವ್ಯವಸ್ಥೆ ಮೂಲಕ ಆ ಗ್ರಹದ ಅಸ್ತಿತ್ವವನ್ನು ಪತ್ತೆಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. "ಇಂಥದ್ದೊಂದು ಗ್ರಹ ಇದೆಯೇ ಎಂಬ ಅನುಮಾನ ಆರಂಭದಲ್ಲಿ ನಮ್ಮನ್ನು ಕಾಡಿತ್ತು. ಸಂಶೋಧನೆ ಮುಂದುವರಿಸಿದ ಅನಂತರ, ಈ ಗ್ರಹ ಇದೆ ಎಂಬುದು ಸಾಬೀತಾಯಿತು'' ಎಂದು ಬಾಟಿಗಿನ್‌ ಹೇಳಿದ್ದಾರೆ.

ಫ್ಲೂಟೋ 9ನೇ ಗ್ರಹ ಅಲ್ಲ!
ಈ ಹಿಂದೆ ಸೌರಮಂಡಲದ 9ನೇ ಗ್ರಹವಾಗಿ ಪ್ಲೂಟೋವನ್ನು ಸೇರಿಸಲಾಗಿತ್ತು. ಆದರೆ 2009ರಲ್ಲಿ ಫ್ಲೂಟೋ ಗ್ರಹ ಕುಬ್ಜ ಗ್ರಹವೆಂಬ ಕಾರಣಕ್ಕೆ ಅದನ್ನು 9ನೇ ಗ್ರಹ ಪಟ್ಟಿಯಿಂದ ಕೈಬಿಡಲಾಗಿತ್ತು.  ನೆಫ್ಚೂನ್‌ ಅನಂತರ ಕೆಲ ಸಣ್ಣ ಮತ್ತು ಮಂಜುಗಡ್ಡೆಯುಕ್ತ ವಸ್ತುಗಳು ಕಂಡುಬಂದ ಹಿನ್ನೆಲೆಯಲ್ಲಿ ಫ್ಲೂಟೋಗೆ ಗ್ರಹಕ್ಕೆ ಇರಬೇಕಾದ ಗುಣಲಕ್ಷಣಗಳು ಇಲ್ಲವೆಂಬ ಕಾರಣಕ್ಕೆ ಅದನ್ನು ಗ್ರಹ  ಪಟ್ಟಿಯಿಂದ ಕೈಬಿಡಲಾಗಿತ್ತು. ಫ್ಲೂಟೋ 9ನೇ ಗ್ರಹವನ್ನುಪಟ್ಟಿಯಿಂದ ಕೈಬಿಟ್ಟಾಗ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈಗ 'ಪ್ಲಾನೆಟ್‌ ನೈನ್‌' ಶೋಧನೆ ಅವರಿಗೆ ಸಂತಸ ತರುತ್ತದೆ  ಎಂದು ಮೈಕ್‌ ಬ್ರೌನ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com