ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ; ಡೂಡಲ್ ಮೂಲಕ ಗೂಗಲ್ ಸಂಭ್ರಮ

ನಾಸಾದ 'ಜೂನೋ ಪ್ರೋಬ್' ಉಪಗ್ರಹ ನಮ್ಮ ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರುವಿನ ಕಕ್ಷೆಯನ್ನು ಐದು ವರ್ಷಗಳ ಕಾಲ ಪ್ರಯಾಣಿಸಿ ಸೇರಿರುವ ಸಂಭ್ರವವನ್ನು ಸರ್ಚ್ ದೈತ್ಯ ಗೂಗಲ್ ಡೂಡಲ್ ಬಿಡಿಸುವ
ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ; ಡೂಡಲ್ ಮೂಲಕ ಗೂಗಲ್ ಸಂಭ್ರಮ
ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ; ಡೂಡಲ್ ಮೂಲಕ ಗೂಗಲ್ ಸಂಭ್ರಮ
ವಾಷಿಂಗ್ಟನ್: ನಾಸಾದ 'ಜೂನೋ ಪ್ರೋಬ್' ಉಪಗ್ರಹ ನಮ್ಮ ಸೌರವ್ಯೂಹದ ಅತಿ ದೊಡ್ಡ ಗ್ರಹ ಗುರುವಿನ ಕಕ್ಷೆಯನ್ನು ಐದು ವರ್ಷಗಳ ಕಾಲ ಪ್ರಯಾಣಿಸಿ ಸೇರಿರುವ ಸಂಭ್ರವವನ್ನು ಸರ್ಚ್ ದೈತ್ಯ ಗೂಗಲ್ ಡೂಡಲ್ ಬಿಡಿಸುವ ಮೂಲಕ ಸಂಭ್ರಮಿಸಿದೆ. 
"ನಾಸಾ ಅಭಿವೃದ್ಧಿಪಡಿಸಿರುವ ಉಪಗ್ರಹ ಭೂಮಿಯಿಂದ ಅತಿ ದೂರದಲ್ಲಿರುವ ಗುರುವಿನ ಕಕ್ಷೆಗೆ ಸೇರಿದೆ" ಎಂದು ಗೂಗಲ್ ತನ್ನ ಹೇಳಿಕೆಯಲ್ಲಿ ಮಂಗಳವಾರ ತಿಳಿಸಿದೆ. 
"ಇಂದಿನ ಡೂಡಲ್ ಮನುಷ್ಯನ ಅತ್ಯದ್ಭುತ ಸಾಧನೆಯ ಕ್ಷಣವನ್ನು ಸಂಭ್ರಮಿಸುತ್ತದೆ, ಬ್ರ್ಯಾವೋ" ಎಂದು ಕೂಡ ಗೂಗಲ್ ಹೇಳಿದೆ. 
ನಮ್ಮ ಸೌರವ್ಯೂಹದ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳುವ ಮತ್ತು ಸೃಷ್ಟಿಯನ್ನು ಅರಿಯುವ ಸಲುವಾಗಿ ಸಿದ್ಧಪಡಿಸಿ ಆಗಸ್ಟ್ 5 2011 ರಂದು ಉಡಾಯಿಸಲಾದ ಜುನೋ ಉಪಗ್ರಹ ಈಗ ಗುರು ಗ್ರಹದ ಕಕ್ಷೆ ಸೇರಿದೆ. 
ಗುರು ಗ್ರಹದ ವಾತಾವರಣವನ್ನು ಚೆನ್ನಾಗಿ ಅರಿಯಲು ಮತ್ತು ಈ ವಾತಾವರಣದಲ್ಲಿ ನೀರು ಮತ್ತು ಅಮೋನಿಯಾ ಅಂಶವನ್ನು ಪತ್ತೆ ಹಚ್ಚಲು ಈ ಉಪಗ್ರಹ ಸಹಕರಿಸಲಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com