ಅಗ್ಗದ ದರದಲ್ಲಿ ಹೆಚ್ ಡಿ ಎಲ್ಇಡಿ ಟಿವಿ ಮಾರಾಟಕ್ಕೆ ರಿಂಗಿಂಗ್ ಬೆಲ್ಸ್ ಯೋಜನೆ

ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ವಿವಾದಕ್ಕೀಡಾಗಿದ್ದ ನೊಯ್ದಾ ಮೂಲದ ರಿಂಗಿಂಗ್ ಬೆಲ್ಸ್ ಈಗ ಅಗ್ಗದ ದರದಲ್ಲಿ ಎಲ್ಇಡಿ ಟಿವಿ ಯನ್ನು ಪರಿಚಯಿಸಲು ಯೋಜನೆ ರೂಪಿಸಿದೆ.
ರಿಂಗಿಂಗ್ ಬೆಲ್ಸ್ ನಿಂದ ಅಗ್ಗದ ದರದ ಹೆಚ್ ಡಿ ಎಲ್ಇಡಿ ಟಿವಿ ಮಾರಾಟದ ಯೋಜನೆ
ರಿಂಗಿಂಗ್ ಬೆಲ್ಸ್ ನಿಂದ ಅಗ್ಗದ ದರದ ಹೆಚ್ ಡಿ ಎಲ್ಇಡಿ ಟಿವಿ ಮಾರಾಟದ ಯೋಜನೆ

ನವದೆಹಲಿ: ಅತಿ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನನ್ನ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ವಿವಾದಕ್ಕೀಡಾಗಿದ್ದ ನೊಯ್ದಾ ಮೂಲದ ರಿಂಗಿಂಗ್ ಬೆಲ್ಸ್ ಈಗ ಅಗ್ಗದ ದರದಲ್ಲಿ ಎಲ್ಇಡಿ ಟಿವಿ ಯನ್ನು ಪರಿಚಯಿಸಲು ಯೋಜನೆ ರೂಪಿಸಿದೆ.

ಅಗ್ಗದ ದರದ ಹೆಚ್ ಡಿ ಎಲ್ ಇಡಿ ಟಿವಿಯನ್ನು ಬಿಡುಗಡೆಗೊಳಿಸುವ ಮೂಲಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ರಿಂಗಿಂಗ್ ಬೆಲ್ಸ್ ಮತ್ತೊಂದು ಬೆಲೆ ಕ್ರಾಂತಿಯನ್ನು ಉಂಟು ಮಾಡುವುದಾಗಿ ತಿಳಿಸಿದೆ. ರಿಂಗಿಂಗ್ ಬೆಲ್ಸ್ ಸಂಸ್ಥೆ  251 ರೂಪಾಯಿ ಬೆಲೆಯ ಸ್ಮಾರ್ಟ್ ಫೋನ್ ಖರೀದಿಗಾಗಿ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ ಜುಲೈ 2ರಿಂದ ಮೊಬೈಲ್ ಫೋನ್ ಡೆಲಿವರಿ ಪ್ರಾರಂಭಿಸಿರುವುದಾಗಿ ಹೇಳಿದೆಯಾದರೂ ಈ ವರೆಗೂ ಮೊಬೈಲ್ ತಲುಪಿರುವ ಬಗ್ಗೆ ಮಾಹಿತಿ ದೊರೆತಿಲ್ಲ.

ಫೆಬ್ರವರಿ ತಿಂಗಳಲ್ಲಿ ಫ್ರೀಡಂ 251 ಮೊಬೈಲ್ ನ ಆನ್ ಲೈನ್ ಮಾರಾಟ ಪ್ರಾರಂಭಿಸಿದ್ದ ರಿಂಗಿಂಗ್ ಬೆಲ್ಸ್ ಖರೀದಿಗಾಗಿ ಬುಕಿಂಗ್ ಮಾಡಿದ್ದ ಗ್ರಾಹಕರಿಗೆ ಮೊಬೈಲ್ ನ್ನು ತಲುಪಿಸದೇ ವಿವಾದದಕ್ಕೆ ಗುರಿಯಾಗಿತ್ತು. ಈ ಬಗ್ಗೆ ದೂರು ದಾಖಲಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿದ್ದ ಸಂಸ್ಥೆ ಮೊಬೈಲ್ ಗಾಜು ಬುಕಿಂಗ್ ಮಾಡಿದ್ದ ಗ್ರಾಹಕರಿಗೆ ಹಣ ವಾಪಸ್ ನೀಡುವುದಾಗಿ ಘೋಷಿಸಿತ್ತು. ಆದರೆ ಶೀಘ್ರದಲ್ಲೇ ಮುಂಗಡ ಬುಕ್ಕಿಂಗ್ ಮಾಡಿರುವ ಗ್ರಾಹಕರಿಗೆ ಮೊಬೈಲ್ ನ್ನು ತಲುಪಿಸಲಾಗುತ್ತದೆ ಎಂದು ಸಂಸ್ಥೆ ಹೇಳಿದ್ದು, ಫ್ರೀಡಂ 251 ಮೊಬೈಲ್ ನ ಮಾದರಿಯಿಯಲ್ಲೇ  ಅಗ್ಗದ ದರದ ಹೆಚ್ ಡಿ ಎಲ್ಇಡಿ ಟಿವಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com