ಜುಲೈ 11ರಿಂದ ಫೇಸ್ ಬುಕ್ ನಲ್ಲಿ ಆಫ್ ಲೈನ್ ವಿಡಿಯೋ ಪ್ರಾಯೋಗಿಕ ಪರೀಕ್ಷೆ

ಬಳಕೆದಾರರಿಗೆ ಉಪಯೋಗವಾಗಲು ಭಾರತದಲ್ಲಿ ಫೇಸ್ ಬುಕ್ ಆಫ್ಲೈನ್ ವೀಡಿಯೊಗಳನ್ನು ತರಲು...
ಫೇಸ್ ಬುಕ್ ಚಿಹ್ನೆ
ಫೇಸ್ ಬುಕ್ ಚಿಹ್ನೆ
ನ್ಯೂಯಾರ್ಕ್: ಬಳಕೆದಾರರಿಗೆ ಉಪಯೋಗವಾಗಲು ಭಾರತದಲ್ಲಿ ಫೇಸ್ ಬುಕ್ ಆಫ್ಲೈನ್ ವೀಡಿಯೊಗಳನ್ನು ತರಲು ಯೋಜನೆ ಹಾಕಿಕೊಂಡಿದೆ. ಭಾರತದಲ್ಲಿ ಫೇಸ್ ಬುಕ್ ಗೆ ವಿಡಿಯೋ ಡೌನ್ ಲೋಡ್ ಮಾಡಿಕೊಳ್ಳಲು ಪ್ರಮುಖ ಪರೀಕ್ಷೆಯನ್ನು ಸಾಮಾಜಿಕ ತಾಣ ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಸೌಲಭ್ಯ ಜಾರಿಗೆ ಬಂದರೆ ಫೇಸ್ ಬುಕ್ ನಲ್ಲಿ ವಿಡಿಯೋ ಡೌನ್ ಲೋಡ್ ಮಾಡಿಕೊಂಡು ಉಳಿಸಿಕೊಂಡು ನಂತರ ಬೇಕೆಂದಾಗ ಬಳಕೆದಾರರು ಬಳಸಿಕೊಳ್ಳಬಹುದು.ಭಾರತದಲ್ಲಿ ಇನ್ನೂ ಅನೇಕ ಜನರಿಗೆ ಮೊಬೈಲ್ ಡಾಟಾ ಮತ್ತು ಇಂಟರ್ನೆಟ್ ಸಂಪರ್ಕದ ಕೊರತೆಯಿದೆ. ಅನೇಕರಿಗೆ ತಾವು ಬಯಸಿದ ವಿಡಿಯೋಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಅನೇಕ ಸ್ಥಳಗಳಲ್ಲಿ ಇಂಟರ್ನೆಟ್ ಕನೆಕ್ಟಿವಿಟಿ ಸಮಸ್ಯೆಯಿರುತ್ತದೆ, ವಿಡಿಯೋಗಳು ಸ್ಪಷ್ಟವಾಗಿ ಇರುವುದಿಲ್ಲ. ಹಾಗಾಗಿ ಫೇಸ್ ಬುಕ್ ಗೆ ವಿಡಿಯೋವನ್ನು ಡೌನ್ ಲೋಡ್ ಮಾಡಿಕೊಂಡು ಫೇಸ್ ಬುಕ್ ನಲ್ಲಿ ಆನ್ ಲೈನ್ ನಲ್ಲಿ ಇದ್ದರೆ ಯಾವಾಗ ಬೇಕಾದರೂ ಹೆಚ್ಚಿನ ಮೊಬೈಲ್ ಡಾಟಾ ಬಳಸದೆ ವಿಡಿಯೋವನ್ನು ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಇರುವಾಗ ಬಳಸಬಹುದು.
ಜನರ ಸಣ್ಣ ಗುಂಪಿನೊಂದಿಗೆ ಫೇಸ್ ಬುಕ್ ಇದರ ಕಾರ್ಯನಿರ್ವಹಣೆಯನ್ನು ಜುಲೈ 11ರಿಂದ ಆರಂಭಿಸಲಿದೆ. ಇಂಟರ್ನೆಟ್ ಸಂಪರ್ಕ ಉತ್ತಮವಿರುವಾಗ ಫೇಸ್ ಬುಕ್ ನಲ್ಲಿ ವಿಡಿಯೋ ಡೌನ್ ಮಾಡಿಕೊಳ್ಳುವಂತೆ ಮತ್ತು ಅದು ನಂತರವೂ ನೋಡಲು ಸಾಧ್ಯವಾಗುತ್ತದೆಯೇ ಎಂದು ವಿವರಿಸುವಂತೆ ಆಯ್ದ ಜನರಿಗೆ ಫೇಸ್ ಬುಕ್ ಕಂಪೆನಿ ಸೂಚಿಸಿದೆ. ಈ ಸಂಬಂಧ ಫೇಸ್ ಬುಕ್ ಇಮೇಲ್ ಕಳುಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com