ಭಾರತೀಯ ಭಾಷೆಗಳು ಡಿಸೆಂಬರ್ ನಿಂದ ಎಲ್ಲಾ ಮೊಬೈಲ್ ಗಳಲ್ಲಿ ಲಭ್ಯ

ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಗಳಲ್ಲಿ ಭಾರತದ ಭಾಷೆಗಳು ಕಡ್ಡಾಯವಾಗಿ ಇರಬೇಕೆಂದು ಸರ್ಕಾರ ಶೀಘ್ರವೇ ಈ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಗಳಲ್ಲಿ ಭಾರತದ ಭಾಷೆಗಳು ಕಡ್ಡಾಯವಾಗಿ ಇರಬೇಕೆಂದು ಸರ್ಕಾರ ಶೀಘ್ರವೇ ಈ ವರ್ಷಾಂತ್ಯಕ್ಕೆ ಆದೇಶ ಹೊರಡಿಸಲಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಸರ್ಕಾರದ ಸೂಚನೆಯಲ್ಲಿ, ಅನೇಕ ಗುಣ ಲಕ್ಷಣಗಳನ್ನು ಹೊಂದಿರುವ ಮೊಬೈಲ್ ಫೋನ್ ಗಳು ಇಂಗ್ಲೀಷ್, ಹಿಂದಿ ಮತ್ತು ಇತರ ಯಾವುದಾದರೊಂದು ಭಾರತೀಯ ಭಾಷೆಯಲ್ಲಿ ಸಂದೇಶ ಕಳುಹಿಸುವ ಆಯ್ಕೆಯನ್ನು ಒದಗಿಸುತ್ತದೆ.
ಮೊಬೈಲ್ ಫೋನ್ ಗಳು ತೆಗೆದುಕೊಳ್ಳುವ ಮೂರನೇ ಭಾಷೆಯನ್ನು ಮೊಬೈಲ್ ತಯಾರಕರು ಅಥವಾ ಪೂರೈಕೆದಾರರು ನಿರ್ಧರಿಸುತ್ತಾರೆ. ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಮೂರನೇ ಭಾಷೆಯನ್ನು ನಿರ್ಧರಿಸುತ್ತಾರೆ.
ಸರ್ಕಾರದ ಸೂಚನೆ ಪ್ರಕಾರ, ಭಾರತದ ಅಧಿಕೃತ 22 ಅಧಿಕೃತ ಭಾಷೆಗಳಿಗೆ ಮೊಬೈಲ್ ನಲ್ಲಿ ಸಂದೇಶ ಓದುವ ಅವಕಾಶ ನೀಡಲಾಗಿದೆ ಮತ್ತು ಈ ಭಾಷೆಗಳನ್ನು ಸಪೋರ್ಟ್ ಮಾಡಲು ಲಿಪಿಯೂ ಇರುತ್ತದೆ. ಈ ವರ್ಷ ಡಿಸೆಂಬರ್ 2016ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಫೋನ್ ಗಳಲ್ಲಿ ಭಾಷೆಯ ಕಡ್ಡಾಯ ಗುಣಮಟ್ಟವನ್ನು ಜಾರಿಗೆ ತರಬೇಕೆಂದು ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಹಾಗಾಗಿ ಮುಂದಿನ ವರ್ಷದಿಂದ ನಾವು ಖರೀದಿಸುವ ಮೊಬೈಲ್ ಗಳಲ್ಲಿ ಎರಡು ಭಾಷೆಗಳಲ್ಲಿ ಸಂದೇಶ ಕಳುಹಿಸುವ ಸೌಲಭ್ಯ ಸಿಗಲಿದೆ.
ಪ್ರಸ್ತುತ ಭಾರತದಲ್ಲಿ 1 ಶತಕೋಟಿಗೂ ಅಧಿಕ ಮೊಬೈಲ್ ಫೋನ್ ಸಂಪರ್ಕವಿದ್ದು, 180 ದಶಲಕ್ಷ ಸ್ಮಾರ್ಟ್ ಫೋನ್ ಗಳ ಬಳಕೆದಾರರಿದ್ದಾರೆ ಎನ್ನಲಾಗಿದೆ.600 ದಶಲಕ್ಷ ಫ್ಯೂಚರ್ ಫೋನ್ ಗಳಿವೆ.
ಸ್ಮಾರ್ಟ್ ಫೋನ್ ಗಳ ಬಳಕೆ ಭಾರತದಲ್ಲಿ ಅಧಿಕವಾಗುತ್ತಿದ್ದು, ಇ-ಸರ್ವಿಸ್ ಸೇವೆಗೂ ನಾಗರಿಕರಿಗೆ ಇದು ಉಪಯೋಗವಾಗುತ್ತದ ಎಂದು ಸರ್ಕಾರದ ಸೂಚನೆ ತಿಳಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com