ಸ್ಮಾರ್ಟ್ ಫೋನ್ ವಿಭಾಗದಲ್ಲಿ 2,850 ಹೆಚ್ಚುವರಿ ಉದ್ಯೋಗ ಕಡಿತಗೊಳಿಸಿದ ಮೈಕ್ರೋಸಾಫ್ಟ್

ಸ್ಮಾರ್ಟ್ ಫೋನ್ ಹಾರ್ಡ್ ಬ್ಯುಸಿನೆಸ್ ವಿಭಾಗದಲ್ಲಿ ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚುವರಿಯಾಗಿ 2,850 ಉದ್ಯೋಗಗಳನ್ನು ಕಡಿತಗೊಳಿಸಿದೆ.
ಮೈಕ್ರೋ ಸಾಫ್ಟ್
ಮೈಕ್ರೋ ಸಾಫ್ಟ್

ನ್ಯೂಯಾರ್ಕ್: ಸ್ಮಾರ್ಟ್ ಫೋನ್ ಹಾರ್ಡ್ ಬ್ಯುಸಿನೆಸ್ ವಿಭಾಗದಲ್ಲಿ ನಷ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಸಂಸ್ಥೆ ಈ ಹಿಂದೆ ಘೋಷಿಸಿದ್ದಕ್ಕಿಂತ ಹೆಚ್ಚುವರಿಯಾಗಿ  2,850 ಉದ್ಯೋಗಗಳನ್ನು ಕಡಿತಗೊಳಿಸಿದೆ.

ಈ ಹಿಂದೆ 1,850 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮೈಕ್ರೋಸಾಫ್ಟ್ ಸಂಸ್ಥೆ ಘೋಷಿಸಿತ್ತು. ಈ ಬಗ್ಗೆ ಜು.29 ರಂದು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಮೈಕ್ರೋಸಾಫ್ಟ್ 2017 ರ ಆರ್ಥಿಕ ವರ್ಷದಲ್ಲಿ ಜಾಗತಿಕವಾಗಿ ಒಟ್ಟು 4,700 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಸ್ಪಷ್ಟಪಡಿಸಿದೆ. ಕಳೆದ ಜೂನ್ ನಲ್ಲಿ ಒಟ್ಟು 7,400 ಕೆಲಸಗಳನ್ನು ಕಡಿತಗೊಳಿಸುವುದಾಗಿ ಮೈಕ್ರೋಸಾಫ್ಟ್ ಸಂಸ್ಥೆ ಹೇಳಿತ್ತು.

ನೋಕಿಯಾ ಸಂಸ್ಥೆಯನ್ನು ಖರೀದಿಸಿರುವ ಮೈಕ್ರೋಸಾಫ್ಟ್ ನೋಕಿಯಾ ಪ್ರಯೋಗವನ್ನು ಅಂತ್ಯಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಮೈಕ್ರೋ ಸಾಫ್ಟ್, ಉದ್ಯೋಗದಿಂದ ತೆಗೆದುಹಾಕಲಾಗುತ್ತಿರುವ ಉದ್ಯೋಗಿಗಳಿಗೆ ಪಾವತಿ ಮಾಡಲು 200 ಮಿಲಿಯನ್ ಡಾಲರ್ ಮೀಸಲಿಟ್ಟಿದೆ.  ಮೈಕ್ರೋ ಸಾಫ್ಟ್ ನ ಈ ನಿರ್ಧಾರದಿಂದಾಗಿ ನೋಕಿಯಾದ ಬಹುತೇಕ ಉದ್ಯೋಗಿಗಳು ಮೈಕ್ರೋ ಸಾಫ್ಟ್ ನಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ವಿಭಿನ್ನತೆಯುಳ್ಳ ಫೋನ್ ಗಳ ಬಗ್ಗೆ ನಾವು ಗಮನವನ್ನು ಕೇಂದ್ರೀಕರಿಸುತ್ತಿದ್ದೇವೆ ಎಂದು ಮೈಕ್ರೋ ಸಾಫ್ಟ್ ನ ಸಿಇಒ ಸತ್ಯ ನಾದೆಲ್ಲಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com