ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್​ನ ಸ್ಮಾರ್ಟ್​ಫೋನ್ ನಿರ್ಮಾಣ ಮಾಡುವ ಯೋಚನೆ ಇಲ್ಲ: ಪಿಚೈ

ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್​ನ ಸ್ಮಾರ್ಟ್​ಫೋನ್ ಗಳನ್ನು ನಿರ್ಮಿಸುವ ಯೋಚನೆ ಇಲ್ಲ ಎಂದು ಭಾರತೀಯ ಮೂಲದ ಗೂಗಲ್ ನ ಮುಖ್ಯ...
ಸುಂದರ್ ಪಿಚೈ
ಸುಂದರ್ ಪಿಚೈ
ನ್ಯೂಯಾರ್ಕ್: ಗೂಗಲ್ ಗೆ ಸದ್ಯ ತನ್ನದೇ ಬ್ರಾಂಡ್​ನ ಸ್ಮಾರ್ಟ್​ಫೋನ್ ಗಳನ್ನು ನಿರ್ಮಿಸುವ ಯೋಚನೆ ಇಲ್ಲ ಎಂದು ಭಾರತೀಯ ಮೂಲದ ಗೂಗಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ್ ಪಿಚೈ ಅವರು ಹೇಳಿದ್ದಾರೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಪಿಚೈ, ಮುಂಬರುವ ದಿನಗಳಲ್ಲಿ ನಮ್ಮ ಜತೆ ಕೈಜೋಡಿಸಿರುವ ಹಾರ್ಡ್​ವೇರ್ ಕಂಪನಿಗಳ ಜತೆ ಕೆಲಸ ಮಾಡುವ ಯೋಜನೆ ಕಡೆ ಹೆಚ್ಚಿನ ಒಲವು ತೋರಲಾಗುತ್ತಿದೆ. ‘ನೆಕ್ಸಸ್’ ಮೇಲೆ ಸಾಕಷ್ಟು ಹೂಡಿಕೆ ಮಾಡಲಾಗಿದ್ದು, ನೆಕ್ಸಸ್ ಡಿವೈಸಸ್​ಗಳ ಉತ್ತಮ ಸೇವೆಯ ಕಡೆ ಹೆಚ್ಚಿನ ಒಲವು ಹೊಂದಿದ್ದೇವೆ. ನಮ್ಮ ಮುಂದೆ ಸಾಕಷ್ಟು ವೈವಿಧ್ಯತೆಯ ಬಿಡಿ ಭಾಗಗಳಿದ್ದು, ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕೆನ್ನುವುದರ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದಿದ್ದಾರೆ.
ಭಾರತ ಮತ್ತು ಚೀನಾದಲ್ಲಿ ಗೂಗಲ್ ಸೇವೆಗಳು ಹೇಗಿವೆ ಎನ್ನುವುದು ಅತ್ಯುತ್ತಮ ಮಾದರಿಯಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದ್ದೇವೆ ಎನ್ನುವ ಸಮಾಧಾನ ನಮಗಿದೆ ಎಂದಿರುವ ಸುಂದರ್ ಪಿಚೈ, ಜಾಗತಿಕವಾಗಿ ಇಂದು ಸಾಕಷ್ಟು ಸ್ಪರ್ಧೆಯಿದೆ. ಸ್ಮಾರ್ಟ್​ಫೋನ್, ಹಾರ್ಡ್​ವೇರ್ ಹೆಚ್ಚು ಸಮರ್ಥವಾದ ಉದ್ಯಮ ಕ್ಷೇತ್ರಗಳಾಗಿವೆ. ಅಮೇಜಾನ್ ಕೂಡ ಆಂಡ್ರಾಯ್್ಡೆ ಸಾಕಷ್ಟು ಅವಲಂಬಿಸಿದೆ. ಆಂಡ್ರಾಯ್್ಡ ಒಂದು ಅತ್ಯದ್ಭುತವಾದ ವೇದಿಕೆಯಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com