ಸ್ವೀಡನ್ ನಲ್ಲಿ ಪ್ರಪ್ರಥಮ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಆರಂಭ

ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ ಹೆಜ್ಜೆಯನ್ನಿರಿಸಿದೆ.
ಸ್ವೀಡನ್ ನಲ್ಲಿ ವಿದ್ಯುತ್ ಚಾಲಿತ ಸರಕು ಸಾಗಣಾ ರಸ್ತೆ ಆರಂಭ (ಟ್ವಿಟರ್ ಚಿತ್ರ)
ಸ್ವೀಡನ್ ನಲ್ಲಿ ವಿದ್ಯುತ್ ಚಾಲಿತ ಸರಕು ಸಾಗಣಾ ರಸ್ತೆ ಆರಂಭ (ಟ್ವಿಟರ್ ಚಿತ್ರ)

ಸ್ಟಾಕ್ ಹೋಮ್: ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ವಿದ್ಯುತ್ ಚಾಲಿತ ಟ್ರಕ್ ರಸ್ತೆ ಸ್ವೀಡನ್ ನಲ್ಲಿ ಉದ್ಘಾಟನೆಯಾಗಿದ್ದು, ವಾಯು ಮಾಲಿನ್ಯ ತಪ್ಪಿಸುವ ನಿಟ್ಟಿನಲ್ಲಿ ಸ್ವೀಡನ್ ಮಹತ್ವದ  ಹೆಜ್ಜೆಯನ್ನಿರಿಸಿದೆ.

ಸ್ವೀಡನ್ ನ ಗಾವ್ಲೆ ನಗರದಲ್ಲಿ ಜಗತ್ತಿನ ಮೊದಲ ವಿದ್ಯುತ್ ಚಾಲಿತ ಟ್ರಕ್ ಗಳ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ ಭಾರಿ ಗಾತ್ರದ ವಿದ್ಯುತ್ ಚಾಲಿತ ಟ್ರಕ್ ಗಳು ಸುಗಮವಾಗಿ  ಚಲಿಸುವ ಮೂಲಕ ಯಶಸ್ವಿಯಾಗಿವೆ. ಗಾವ್ಲೆಯ ಇ16 ರಸ್ತೆಯಲ್ಲಿ ಈ ವಿಶೇಷ ವ್ಯವಸ್ಯೆಯ ರಸ್ತೆಯನ್ನು ನಿರ್ಮಿಸಲಾಗಿದ್ದು, ರಸ್ತೆಯ ಮೇಲ್ಬದಿಯಲ್ಲಿ ಹೈವೋಲ್ಟೇಜ್ ವಿದ್ಯುತ್ ಪ್ರವಹಿಸುವ  ತಂತಿಗಳನ್ನು ಅಳವಡಿಸಿ ಅವುಗಳ ಮೂಲಕ ವಿದ್ಯುತ್ ಚಾಲಿತ ಟ್ರಕ್ ಗಳನ್ನು ಚಲಾಯಿಸಲಾಗಿದೆ.

ಸ್ವೀಡನ್ ನ ಖ್ಯಾತ ಟ್ರಕ್ ಹಾಗೂ ಲಾರಿ ತಯಾರಿಕಾ ಸಂಸ್ಥೆ ಸ್ಕಾನಿಯಾ, ಈ ವಿಶೇಷ ಟ್ರಕ್ ಗಳನ್ನು ತಯಾರಿಸಿದೆ. ಇನ್ನು ಈ ವಿಶೇಷ ಟ್ರಕ್ ಗಳಿಗೆಂದೇ ಗಾವ್ಲೆಯ ಇ16 ರಸ್ತೆಯಲ್ಲಿ ಸುಮಾರು  2ಕಿ.ಮೀ ಉದ್ದ ಹೈ ವೋಲ್ಟೇಜ್ ವಿದ್ಯುತ್ ತಂತಿ ಅಳವಡಿಸಲಾಗಿದೆ. ಇನ್ನು ವಿಶ್ವದ ನಾನಾ ಭಾಗಗಳಲ್ಲಿ ವಿದ್ಯುತ್ ಚಾಲಿತ ರಸ್ತೆ ಮಾರ್ಗಗಳಿವೆಯಾದರೂ ಅವು ಪ್ರಯಾಣಿಕ ಮಾರ್ಗಗಳಾಗಿವೆ.  ಆದರೆ ಇದೇ ಮೊದಲ ಬಾರಿಗೆ ಸರಕು ಸಾಗಣಾ ಮಾರ್ಗವನ್ನು ಪ್ರಯೋಗಾರ್ಥವಾಗಿ ಸ್ವೀಡನ್ ನಲ್ಲಿ ಉದ್ಘಾಟನೆ ಮಾಡಲಾಗಿದೆ.

ಇತ್ತೀಚೆಗಷ್ಟೇ ಅಮೆರಿಕ ಮೂಲದ ಪರಿಸರ ಅಧ್ಯಯನ ಸಂಸ್ಥೆ ಹೆಚ್ಚಾಗುತ್ತಿರುವ ಕಾರ್ಬನ್ ಡೈ ಆಕ್ಸೈಡ್ ನಿಂದಾಗಿ ಹಸಿರುಮನೆ ಪರಿಣಾಮದ ಕುರಿತು ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ  ಸ್ವೀಡನ್ ಹೊಗೆರಹಿತ ಸರಕು ಸಾಗಣಾ ಮಾದರಿಯನ್ನು ವಿಶ್ವಕ್ಕೇ ಪರಿಚಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com