ವಾಟ್ಸಪ್ ಬಳಕೆದಾರರಿಗೆ ಸಿಹಿಸುದ್ದಿ, 5 ವೈಶಿಷ್ಟ್ಯಗಳ ಆವಿಷ್ಕಾರ

ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ ಇದೀಗ ತನ್ನ ನೂತನ ಆವೃತ್ತಿಗೆ 5 ವಿಶೇಷ ಅಪ್ ಡೇಟ್ಸ್ ಗಳನ್ನು ಸೇರಿಸಿದ್ದು, ಈ ಹೊಸ ಫೀಚರ್'ಗಳು ಆಂಡ್ರಾಯ್ಡ್ ಮತ್ತು ಐಫೋನ್..
ವಾಟ್ಸಪ್ (ಸಂಗ್ರಹ ಚಿತ್ರ)
ವಾಟ್ಸಪ್ (ಸಂಗ್ರಹ ಚಿತ್ರ)

ನವದೆಹಲಿ: ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅವಿಭಾಜ್ಯ ಅಂಗವಾಗಿರುವ ವಾಟ್ಸಾಪ್ ಇದೀಗ ತನ್ನ ನೂತನ ಆವೃತ್ತಿಗೆ 5 ವಿಶೇಷ ಅಪ್ ಡೇಟ್ಸ್ ಗಳನ್ನು ಸೇರಿಸಿದ್ದು, ಈ ಹೊಸ  ಫೀಚರ್'ಗಳು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿರಲಿದೆ ಎಂದು ಸಂಸ್ಥೆ ಹೇಳಿದೆ.

ವಾಟ್ಸಾಪ್ ನೂತನ ಆವೃತ್ತಿ 2.12.15ರಲ್ಲಿ ಈ ಹೊಸ ಆವೃತ್ತಿಯಲ್ಲಿ ಈ ಹೊಸ ಫೀಚರ್ ಗಳನ್ನು ಸೇರಿಸಲಾಗಿದ್ದು, ಬಳಕೆದಾರರು ಖಂಡಿತ ಖುಷಿಯಾಗಲಿದ್ದಾರೆ ಎಂಬುದು ಸಂಸ್ಥೆಯ ಅಂಬೋಣ.

ಸಂಸ್ಥೆ ತನ್ನ ನೂತನ ಆವೃತ್ತಿಯಲ್ಲಿ ಸೇರಿಸಿರುವ ಹೊಸ ಆವಿಷ್ಕಾರಗಳ ಪಟ್ಟಿ ಇಂತಿದೆ.
1) ಫೋಟೋ ಶೇರಿಂಗ್:
ಇಷ್ಟು ದಿನ ನಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಸೇವ್ ಆಗಿರುವ ಫೋಟೊಗಳನ್ನು ಮಾತ್ರ ವಾಟ್ಸಪ್ ಮೂಲಕ ಶೇರ್ ಮಾಡಬಹುದಿತ್ತು. ಮೊಬೈಲ್ ಮೆಮೊರಿ ಅಲ್ಲದ ಇತರೆ ಶೇರಿಂಗ್ ಅಪ್ಶನ್  ಇರಲಿಲ್ಲಿ. ಇದೀಗ ಈ ಹೊಸ ವರ್ಷನ್ ನಲ್ಲಿ ಈ ಫೀಚರ್ ಸೇರಿಸಲಾಗಿದ್ದು. ಡ್ರಾಪ್ ಬಾಕ್ಸ್, ಗೂಗಲ್ ಡ್ರೈವ್, ಒನ್ ಡ್ರೈವ್ ಮೊದಲಾದ ಆ್ಯಪ್'ಗಳಿಗೆ ವಾಟ್ಸಾಪ್ ಸಪೋರ್ಟ್ ಮಾಡುತ್ತದೆ.

2) ಡಾಕ್ಯುಮೆಂಟ್ ಶೇರಿಂಗ್:
ವಾಟ್ಸಪ್ ಮೊದಲು ಡಾಕ್ಯುಮೆಂಟ್ ಶೇರಿಂಗ್ ವ್ಯವಸ್ಥೆ ಇರಲಿಲ್ಲ. ಇದೀಗ ಈ ಅವಕಾಶವನ್ನು ಸಂಸ್ಥೆ ಒದಗಿಸಿದೆ. ಆದರೆ ಒಂದು ಡಾಕ್ಯುಮೆಂಟ್'ನ ಗರಿಷ್ಠ ಗಾತ್ರದ ಮಿತಿ 100ಎಂಬಿಗೆ  ಸೀಮಿತಗೊಳಿಸಲಾಗಿದೆ.

3) ಬ್ಯಾಕ್'ಗ್ರೌಂಡ್ ಕಲರ್:
ಪರಿಷ್ಕೃತ ಆವೃತ್ತಿಯಲ್ಲಿ ನೀವು ನಿಮ್ಮಿಷ್ಟದ ವಾಟ್ಸಾಪ್ ಬ್ಯಾಕ್'ಗ್ರೌಂಡ್ ಕಲರನ್ನು ಅನ್ನು ಆಯ್ದುಕೊಳ್ಳಬಹುದು. ವಾಟ್ಸಾಪ್'ನ ಸೆಟ್ಟಿಂಗ್ ಮೆನುದಲ್ಲಿ ಈ ಅವಕಾಶವಿರುತ್ತದೆ.

4) ಸ್ಟೋರೇಜ್ ಮತ್ತು ಸ್ಪೇಸ್:
ಹೊಸ ಆವೃತ್ತಿಯ ವಾಟ್ಸಾಪ್ ಕಾರ್ಯನಿರ್ವಹಿಸಲು ಮೊದಲಿಗಿಂತ ಕಡಿಮೆ ಜಾಗ ಮಾತ್ರ ಸಾಕು. ಫೋನ್'ನಲ್ಲಿ ಸ್ಥಳವಾವಕಾಶದ ಕೊರತೆ ಇದ್ದವರಿಗೆ ಹೊಸ ಫೀಟರ್ ನಿಂದ  ಅನುಕೂಲವಾಗುತ್ತದೆ.

5) ವಿಡಿಯೋ ಝೂಮ್:
ವಾಟ್ಸಾಪ್'ನಲ್ಲಿ ವಿಡಿಯೋಗಳನ್ನು ಝೂಮ್ ಮಾಡಿ ನೋಡಲು ಸಾಧ್ಯವಾಗಲಿಲ್ಲ ಎಂದು ಕೊರಗುತ್ತಿದ್ದವರಿಗೆ ಈ ಹೊಸ ವರ್ಶನ್ ಬಹುಶಃ ಸಿಹಿ ಸುದ್ದಿ ನೀಡಿದೆ. ಹೊಸ ವರ್ಶನ್'ನ ವಾಟ್ಸಾಪ್'ನಲ್ಲಿ  ವಿಡಿಯೋವನ್ನು ದೊಡ್ಡದು ಮಾಡಿ ನೋಡುವ ಅವಕಾಶ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com