
ಭುವನೇಶ್ವರ: ದೇಶೀಯ ನಿರ್ಮಿತ ಪರಮಾಣು ಸಾಮರ್ಥ್ಯದ ಅಗ್ನಿ-1 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ಒಡಿಶಾ ಕರಾವಳಿಯಲ್ಲಿ ಭಾರತ ಯಶಸ್ವಿಯಾಗಿ ಪೂರೈಸಿದೆ.
700 ಕಿಲೋ ಮೀಟರ್ ದೂರದಲ್ಲಿರುವ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು, ಮೇಲ್ಮೈಯಿಂದ ಮೇಲ್ಮೈ ಕ್ಷಿಪಣಿಯನ್ನು ಇಂದು ಬೆಳಗ್ಗೆ 9.11ರ ವೇಳೆಗೆ ಭುವನೇಶ್ವರದಿಂದ 150 ಕಿಲೋ ಮೀಟರ್ ದೂರದಲ್ಲಿರುವ ಅಬ್ದುಲ್ ಕಲಾಂ ದ್ವೀಪದ ಆಂತರಿಕ ಪರೀಕ್ಷಾ ಶ್ರೇಣಿಯಲ್ಲಿರುವ ಲಾಂಚ್ ಪ್ಯಾಡ್ ನಿಂದ ಉಡಾಯಿಸಲಾಯಿತು.
ವ್ಯೂಹಾತ್ಮಕ ಪಡೆ ಕಮಾಂಡ್ ನ ತರಬೇತಿಯ ಭಾಗವಾಗಿ ಈ ಪರೀಕ್ಷಾರ್ಥ ಉಡಾವಣೆ ಕೈಗೊಳ್ಳಲಾಗಿದ್ದು, ಪ್ರಯೋಗ ಯಶಸ್ವಿಯಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ ಡಿಒ)ದ ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಮ ಶ್ರೇಣಿಯ ಖಂಡಾಂತರ ಕ್ಷಿಪಣಿಯನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದ್ದು, ಅಗ್ನಿ-1 ಕ್ಷಿಪಣಿಗೆ ಅತ್ಯಾಧುನಿಕ ಸಂಚರಣೆ ವ್ಯವಸ್ಥೆಯನ್ನು ಅಳವಡಿಸಿರಲಾಗುತ್ತದೆ. ಇದರ ಮೂಲಕ ನಿಖರತೆಯ ಒಂದು ಉನ್ನತ ಮಟ್ಟದ ಗುರಿ ತಲುಪುತ್ತದೆ.
ಈ ಕ್ಷಿಪಣಿಯು ಸಾವಿರ ಕೆ.ಜಿ ತೂಕದ ಪೇಲೋಡ್ ಅಥವಾ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
Advertisement