ಅತಂತ್ರ ಸ್ಥಾನದಲ್ಲಿ ಫ್ಲುಟೋ

ಪ್ಲೋಟೋ ಗ್ರಹವೇ? ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶಯ ವ್ಯಕ್ತ ಪಡಿಸಿ ಈ ಬಗ್ಗೆ ಹಲವಾರು ಚರ್ಚೆಗಳು ನಡೆದಿತ್ತು. ಆದರೆ ಈಗ ಫ್ಲುಟೋ ಏಕ ಕಾಲಕ್ಕೆ..
ಫ್ಲುಟೋ
ಫ್ಲುಟೋ
ವಾಷಿಂಗ್ಟನ್‌: 1930ರಲ್ಲಿ ಕ್ಲೈಡ್ ಟೋಂಬಾ ಪತ್ತೆ ಹಚ್ಚಿದ್ದ ಫ್ಲುಟೋ ಇದೀಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಪ್ಲೋಟೋ ಗ್ರಹವೇ? ಎಂಬುದರ ಬಗ್ಗೆ ವಿಜ್ಞಾನಿಗಳು ಸಂಶಯ ವ್ಯಕ್ತ ಪಡಿಸಿ ಈ ಬಗ್ಗೆ ಹಲವಾರು ಚರ್ಚೆಗಳು ನಡೆದಿತ್ತು. ಆದರೆ ಈಗ ಫ್ಲುಟೋ ಏಕ ಕಾಲಕ್ಕೆ ಕುಬ್ಜಗ್ರಹ ಮತ್ತು ಧೂಮಕೇತುವಿನ ಸ್ವಭಾವವನ್ನು ತೋರಿಸುತ್ತಿದೆ ಎಂದು ವಿಜ್ಞಾನಿಗಳು ವಾದಿಸುತ್ತಿದ್ದಾರೆ.ಚ
ನೂರಾರು ವರುಷಗಳ ಹಿಂದೆ ಫ್ಲುಟೋವನ್ನು ಪತ್ತೆ ಹಚ್ಚಿ ಸೌರವ್ಯೂಹದಲ್ಲಿ 9 ನೇ ಗ್ರಹವಾಗಿ ಅದನ್ನು ಪರಿಗಣಿಸಿದ್ದರೂ, 2006ರಲ್ಲಿ ಪ್ಲುಟೋಗೆ ಆ ಸ್ಥಾನ ನಷ್ಟವಾಯಿತು. ಅಂತಾರಾಷ್ಟ್ರೀಯ ಆಸ್ಟ್ರೋನೋಮಿಕಲ್ ಯೂನಿಯನ್ ಫ್ಲುಟೋವನ್ನು ಕುಬ್ಜ ಗ್ರಹವಾಗಿ ಪರಿಗಣಿಸಿತು.  ಸೌರವ್ಯೂಹದಲ್ಲಿ ಸಿರಸ್, ಏರಿಸ್, ಹಾಮಿಯಾ, ಮೆಕ್‌ಮೆಕ್ ಮೊದಲಾದ ಕುಬ್ಜಗ್ರಹಗಳೊಂದಿಗೆ ಫ್ಲುಟೊ ಕೂಡಾ ಸೇರ್ಪಡೆಯಾಗಿದ್ದು  2006ರಲ್ಲಾಗಿತ್ತು. 
ಆದಾಗ್ಯೂ, ಸೌರವ್ಯೂಹದಲ್ಲಿನ ಕಿಪ್ಲರ್ ಬೆಲ್ಟ್ ನಲ್ಲಿ ಸೂರ್ಯನಿಂದ  590 ಕೋಟಿ ಕಿಲೋಮೀಟರ್ ದೂರದಲ್ಲಿರುವ ಕುಬ್ಜಗ್ರಹ ಮಾತ್ರವೆಂದು ಪ್ಲುಟೋವನ್ನು ಪರಿಗಣಿಸಲು ಸಾಧ್ಯವೇ? ಎಂದು ವಿಜ್ಞಾನಿಗಳು ಕೇಳುತ್ತಿದ್ದಾರೆ. ಇದೀಗ ಪ್ರಸ್ತುತ ಗ್ರಹವು ಧೂಮಕೇತುವಿನ ಸ್ವಭಾವವನ್ನೂ ತೋರಿಸುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿರುವುದರಿಂದ ಇದೀಗ ಫ್ಲುಟೊದ ಸ್ಥಾನ ಅತಂತ್ರದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com