ಗೂಗಲ್‌ನ ಮುಂದಿನ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿ ಹೆಸರು?

ಯಾರಿಗೆ ಬೇಕಾದರೂ ಗೂಗಲ್‌ನ ಹೊಸ ಆ್ಯಂಡ್ರಾಯ್ಡ್ ವರ್ಷನ್‌ಗೆ ದೇಸಿ ಸಿಹಿತಿಂಡಿಯ ಹೆಸರನ್ನು ಸೂಚಿಸಬಹುದು. ಅತೀ ಹೆಚ್ಚು ಜನರು ಸೂಚಿಸಿದ ತಿಂಡಿಯ ಹೆಸರನ್ನು...
ಆ್ಯಂಡ್ರಾಯ್ಡ್
ಆ್ಯಂಡ್ರಾಯ್ಡ್
ನವದೆಹಲಿ: ಕಳೆದ ವರ್ಷ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಭೇಟಿ ನೀಡಿದಾಗ ಅವರಲ್ಲಿ, ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಂ ಆ್ಯಂಡ್ರಾಯ್ಡ್ ನ ಹೊಸ ವರ್ಷನ್‌ಗೆ ಭಾರತೀಯ ಸಿಹಿತಿಂಡಿಯ ಹೆಸರು ಯಾಕೆ ಇಟ್ಟಿಲ್ಲ? ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿ ಪಿಚೈ, ನಾನು ಈ ಬಗ್ಗೆ ನನ್ನ ಅಮ್ಮನಲ್ಲಿ ಸಲಹೆ ಕೇಳುತ್ತೇನೆ. ದೇಸಿ ಸಿಹಿತಿಂಡಿಯ ಹೆಸರಿಡುವ ಬಗ್ಗೆ ಗೂಗಲ್ ಆನ್‌ಲೈನ್ ಅಭಿಪ್ರಾಯ ಸಂಗ್ರಹ ಮಾಡುವುದಾಗಿ ಎಂದಿದ್ದರು.
ಪಿಚೈ ತಾವು ಹೇಳಿದಂತೆ ಮಾಡಿದ್ದಾರೆ. ಆ್ಯಂಡ್ರಾಯ್ಡ್ ನ ಹೊಸ ವರ್ಷನ್‌ಗೆ ಭಾರತೀಯ ತಿಂಡಿಯ ಹೆಸರು ಸೂಚಿಸುವಂತೆ ಗೂಗಲ್ ಆನ್‌ಲೈನ್‌ನಲ್ಲಿ ಜನರಿಂದ ಅಭಿಪ್ರಾಯ ಸಂಗ್ರಹಿಸಲು ಆರಂಭಿಸಿದೆ. 
ಯಾರಿಗೆ ಬೇಕಾದರೂ ಗೂಗಲ್‌ನ ಹೊಸ  ಆ್ಯಂಡ್ರಾಯ್ಡ್  ವರ್ಷನ್‌ಗೆ ದೇಸಿ ಸಿಹಿತಿಂಡಿಯ ಹೆಸರನ್ನು ಸೂಚಿಸಬಹುದು. ಅತೀ ಹೆಚ್ಚು ಜನರು ಸೂಚಿಸಿದ ತಿಂಡಿಯ ಹೆಸರನ್ನು ಆಂಡ್ರಾಯ್ಡ್ ಹೊಸ ವರ್ಷನ್‌ಗೆ ಇರಿಸಲಾಗುವುದು.
ಹೆಸರು ಸೂಚಿಸುವುದು ಹೇಗೆ?
https://www.android.com/versions/name-n/
ಇಲ್ಲಿ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ. ಅಲ್ಲಿ ಎನ್ ಎಂಬ ಇಂಗ್ಲಿಷ್ ಅಕ್ಷರದಿಂದ ಆರಂಭವಾಗುವ ದೇಸಿ ಸಿಹಿತಿಂಡಿಯ ಹೆಸರೊಂದನ್ನು ಟೈಪ್ ಮಾಡಿ Submit ಬಟನ್ ಕ್ಲಿಕ್ ಮಾಡಿ.
ಪಿಚೈ ಜತೆಗಿನ ಸಂವಾದದಲ್ಲಿ ಆ್ಯಂಡ್ರಾಯ್ಡ್ ನ ಹೊಸ ವರ್ಷನ್‌ಗೆ ಪೇಡಾ, ನೆಯ್ಯಪ್ಪಮ್, ನನ್‌ಖಟೈ ಎಂಬ ಹೆಸರುಗಳು ಕೇಳಿ ಬಂದಿದ್ದವು. ಆದಾಗ್ಯೂ, ಈ ಬಾರಿ ಎನ್ ನಿಂದಲೇ ಆರಂಭವಾಗುವ ಸಿಹಿತಿಂಡಿಯ ಹೆಸರು ಬೇಕಾಗಿದೆ.
ಎನ್ ಅಕ್ಷರದಿಂದಲೇ ಆರಂಭವಾಗುವ ಸಿಹಿತಿಂಡಿ ಹೆಸರೇ ಯಾಕೆ?
2008ರಲ್ಲಿ ಆ್ಯಂಡ್ರಾಯ್ಡ್ ಆರಂಭವಾಗಿದ್ದು, ಅದರ ನಂತರದ ವರ್ಷನ್‌ಗೆ 1.5 ಎಂದು ಹೆಸರಿಟ್ಟು, ಆಮೇಲೆ ಒಂದೊಂದು ವರ್ಷನ್ ಗೂ ಸಿಹಿತಿಂಡಿ ಹೆಸರುಗಳನ್ನಿರಿಸುವ ಸಂಪ್ರದಾಯ ಆರಂಭವಾಗಿತ್ತು. 1.5 ವರ್ಷನ್ ನ ಹೆಸರು ಸಿ ಇಂದ ಆರಂಭವಾಗಿದ್ದು, ಕಪ್ ಕೇಕ್ (Cupcake)  ಎಂದಾಗಿತ್ತು.  ನಂತರದ 1.6 ವರ್ಷನ್‌ಗೆ ಡೋನಟ್ (Donut) ಎಂದು ಹೆಸರಿಡಲಾಯಿತು. ಇದರ ನಂತರದ ವರ್ಷನ್‌ಗಳಿಗೆ ಎಕ್ಲೇರ್ (Eclair), ಫ್ರೋಯೋ (Froyo), ಜಿಂಜರ್ ಬ್ರೆಡ್ (Gingerbread), ಹನೀಕೋಂಬ್ (Honeycomb), ಐಸ್ ಕ್ರೀಂ ಸ್ಯಾಂಡ್ವಿಚ್ (Ice Cream Sandwich), ಜೆಲ್ಲಿಬೀನ್ (Jelly Bean,  ಕಿಟ್‌ಕ್ಯಾಟ್ (KitKat), 
 ಲಾಲಿಪೋಪ್  (Lollipop) ಎಂಬ ಹೆಸರಿಡಲಾಯಿತು. ಲೇಟೆಸ್ಟ್ ವರ್ಷನ್ 6.0 ಗೆ ಮಾರ್ಷ್‌ಮೆಲ್ಲೋ (Marshmallow) ಎಂಬ ಹೆಸರಿಟ್ಟಿದ್ದು, ಮುಂದಿನ ವರ್ಷನ್‌ಗೆ ಹೆಸರು ಸೂಚಿಸಬೇಕಾಗಿದೆ.
ಇಂಗ್ಲಿಷ್ ಅಕ್ಷರಮಾಲೆಯ C ಅಕ್ಷರದಿಂದ ಆರಂಭವಾದ ಹೆಸರೀಗ N ಅಕ್ಷರದಲ್ಲಿ ಬಂದು ನಿಂತಿದೆ. ಈಗಾಗಲೇ ನೆಯ್ಯಪ್ಪಂ, ನಾರಂಞಮಿಠಾಯಿ ಮೊದಲಾದ ಹೆಸರುಗಳನ್ನು ಭಾರತೀಯರು ಸೂಚಿಸಿದ್ದಾರೆ. 
ಭಾರತದಲ್ಲಿನ ಅದ್ಯಾವುದೇ ಪ್ರಾದೇಶಿಕ ಸಿಹಿತಿಂಡಿಯಾದರೂ ಸರಿ, N ನಿಂದ ಆರಂಭವಾಗುವ ಹೆಸರಾಗಿದ್ದು, ಆ ಹೆಸರನ್ನು ಹೆಚ್ಚು ಮಂದಿ ಸೂಚಿಸಿದ್ದರೆ, ಮುಂಬರುವ ಆ್ಯಂಡ್ರಾಯ್ಡ್ ವರ್ಷನ್ ಗೆ ಆ ಸಿಹಿತಿಂಡಿಯ ಹೆಸರು ಇಡಲು ಗೂಗಲ್ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com