ಅಕ್ಷರ ಮಿತಿ ತೆರವುಗೊಳಿಸಿ ಹೊಸ ರೂಪ ಪಡೆಯಲಿರುವ ಟ್ವಿಟ್ಟರ್

ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗದ ಮಾಧ್ಯಮವೆಂಬ ಹೆಸರಿಗೆ ಪಾತ್ರವಾಗಿರುವ ಟ್ಟಿಟ್ಟರ್ ಇದೀಗ ಸಂದೇಶ ಪ್ರಕಟಿಸಲು ನಿಗದಿಪಡಿಸಲಾಗಿರುವ 140 ಅಕ್ಷರ ಮಿತಿಯನ್ನು ತೆರವುಗೊಳಿಸಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನ್ಯೂಯಾರ್ಕ್: ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವೇಗದ ಮಾಧ್ಯಮವೆಂಬ ಹೆಸರಿಗೆ ಪಾತ್ರವಾಗಿರುವ ಟ್ಟಿಟ್ಟರ್ ಇದೀಗ ಸಂದೇಶ ಪ್ರಕಟಿಸಲು ನಿಗದಿಪಡಿಸಲಾಗಿರುವ 140 ಅಕ್ಷರ ಮಿತಿಯನ್ನು ತೆರವುಗೊಳಿಸಲು ನಿರ್ಧರಿಸಿದ್ದು, ಅಕ್ಷರ ಮಿತಿ ತೆರವು ಮೂಲಕ ಹೊಸ ಹೆಜ್ಜೆ ಇಡುವುದಾಗಿ ಘೋಷಣೆ ಮಾಡಿದೆ.

ಕಳೆದ ಹತ್ತು ವರ್ಷಗಳಿಂದಲೂ ಜನರ ಪ್ರೀತಿ ಪಾತ್ರವಾಗಿರುವ ಟ್ವಿಟ್ಚರ್, 140 ಅಕ್ಷರಗಳ ಪದ ಸಂದೇಶ, ಫೋಟೋಗಳು, ವಿಡಿಯೋಗಳಂಥ ಕ್ರಿಯಾತ್ಮಕ ಅಭಿವ್ಯಕ್ತಿಗಳು, ಹ್ಯಾಶ್ ಟ್ಯಾಗ್ ಗಳಂತಹ ಹೊಸ ಹೊಸ ವೈವಿಧ್ಯಗಳನ್ನು ಆವಾಹಿಸಿಕೊಂಡು ಬೆಳೆದುಕೊಂಡು ಬಂದಿದೆ.

ಟ್ವಿಟ್ಟರ್ ನಲ್ಲಿ ಅಭಿವ್ಯಕ್ತಪಡಿಸಲು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಆದರೆ, ಏನೇ ಬರೆದರೂ ಅದು ಕೇವಲ 140 ಅಕ್ಷರಗಳ ಪದಗಳಾಗಿರಬೇಕೆಂಬ ನಿಯಮ ಈಗಲೂ ಟ್ವಿಟ್ಟರ್ ನಲ್ಲಿದೆ. ಹೀಗಾಗಿ ಈ ನಿಯಮದಿಂದ ಹಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಳಕೆದಾರರ ಸಮಸ್ಯೆಯನ್ನು ಆಲಿಸಿರುವ ಟ್ವಿಟ್ಟರ್ ಇದೀಗ ಸ್ಪಂದನೆ ನೀಡಿದ್ದು, ಅಕ್ಷರ ಮಿತಿಯನ್ನು ತೆರವುಗೊಳಿಸಿ, ಹೊಸ ರೂಪದಲ್ಲಿ ಮೂಡಿಬರುವುದಾಗಿ ತಿಳಿಸಿದೆ.

ಟ್ವಿಟರ್ ಆಸ್ಟ್ರೇಲಿಯಾ ವ್ಯವಸ್ಥಾಪಕ ನಿರ್ದೇಶಕಿ ಕರೆನ್ ಸ್ಟಾಕ್ಸ್ ಈ ಬಗ್ಗೆ ಘೋಷಣೆ ಮಾಡಿದ್ದು, ಟ್ವಿಟರ್ ನಲ್ಲಿರುವ 140 ಅಕ್ಷರ ಮಿತಿಯನ್ನು ಮುಂಬರುವ ತಿಂಗಳಿನಲ್ಲಿ ತೆರವುಗೊಳಿಸಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಮಗೆ ಮಿಲಿಯನ್ ಗಿಂತಲೂ ಹೆಚ್ಚು ಟ್ವಿಟ್ಟರ್ ಬಳಕೆದಾರರಿದ್ದಾರೆ.

ಟ್ವಿಟ್ಟರ್ ಬಳಕೆದಾರರು ಟ್ವಿಟ್ಟರ್ ನಲ್ಲಿ ಕೆಲವು ಬದಲಾವಣೆಗನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿ ಟ್ವಿಟ್ಟರ್ ನಲ್ಲಿ ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಒಂದೇ ಟ್ವೀಟ್ ನ್ನು ಮತ್ತೆ ರಿಟ್ವೀಟ್ ಮಾಡುವ ಅವಕಾಶವನ್ನು ಬದಲಾವಣೆಯಲ್ಲಿ ನೀಡಲಾಗುತ್ತದೆ. ಇದಲ್ಲದೆ. ಇನ್ನಷ್ಟು ಬದಲಾವಣೆಗಳನ್ನು ಮಾಡಿದ್ದು, ಈ ಎಲ್ಲಾ ಬದಲಾವಣೆಗಳು ಮುಂಬರುವ ತಿಂಗಳುಗಳಲ್ಲಿ ಅಳವಡಿಕೆ ಮಾಡಲಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

ಅಕ್ಷರ ಮಿತಿ ತೆರವಿನಿಂದ ಹೆಚ್ಚು ಪದಗಳ ಸಂದೇಶ ಪ್ರಕಟಿಸುವುದು ಇನ್ನು ಮುಂದೆ ಟ್ವಿಟ್ಟರ್ ನಲ್ಲಿ ಸಾಧ್ಯವಾಗಲಿದೆ. ಹೊಸ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಮೆಸೇಜಿಂಗ್ ಸೇವೆಯನ್ನು ಇನ್ನಷ್ಟು ಸರಳಗೊಳಿಸುವುದಾಗಿಯೂ ಕಂಪನಿ ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com