ಖ್ಯಾತ ಭೌತಶಾಸ್ತ್ರಜ್ಞ ಎಂ ಜಿ ಕೆ ಮೆನನ್ ವಿಧಿವಶ

ಕಳೆದ ಐದು ದಶಕಗಳಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಭೌತಶಾಸ್ತ್ರಜ್ಞ ಪ್ರೊ. ಎಂ ಜಿ ಕೆ ಮೆನನ್ ಇಂದು ನಿಧನರಾಗಿದ್ದಾರೆ.
ಖ್ಯಾತ ಭೌತಶಾಸ್ತ್ರಜ್ಞ ಎಂ ಜಿ ಕೆ ಮೆನನ್ ವಿಧಿವಶ
ಖ್ಯಾತ ಭೌತಶಾಸ್ತ್ರಜ್ಞ ಎಂ ಜಿ ಕೆ ಮೆನನ್ ವಿಧಿವಶ
ನವದೆಹಲಿ: ಕಳೆದ ಐದು ದಶಕಗಳಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಖ್ಯಾತ ಭೌತಶಾಸ್ತ್ರಜ್ಞ ಪ್ರೊ. ಎಂ ಜಿ ಕೆ ಮೆನನ್ ಇಂದು ನಿಧನರಾಗಿದ್ದಾರೆ. ಅವರಿಗೆ ೮೮ ವರ್ಷ ವಯಸ್ಸಾಗಿತ್ತು ಮತ್ತು ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ನರಳುತ್ತಿದ್ದರು ಎಂದು ತಿಳಿದುಬಂದಿದೆ. 
ಮೆನನ್ ತಮ್ಮ ಪತ್ನಿ, ಒಬ್ಬ ಪುತ್ರ ಮತ್ತು ಒಬ್ಬಳು ಪುತ್ರಿಯನ್ನು ತೊರೆದಿದ್ದಾರೆ. ವಿ ಪಿ ಸಿಂಗ್ ಸರ್ಕಾರದಲ್ಲಿ ವಿಜ್ಞಾನ ತಂತ್ರಜ್ಞಾನ ಮತ್ತು ಶಿಕ್ಷಣ ರಾಜ್ಯ ಸಚಿವರಾಗಿ ಕೂಡ ಮೆನನ್ ಸೇವೆ ಸಲ್ಲಿಸಿದ್ದರು. ಇವರು ಅದಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗು ಪರಿಸರ ಖಾತೆ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 
೧೯೭೨ ರಲ್ಲಿ ಇಸ್ರೋ ಸಂಸ್ಥೆಯ ಅಧ್ಯಕ್ಷರಾಗಿ ಮುನ್ನಡೆಸಿದ್ದ ಮೆನನ್ ತಮ್ಮ ೩೫ ನೆಯ ವಯಸ್ಸಿನಲ್ಲೆಯೇ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನನ್ನ ಕೂಡ ಮುನ್ನಡೆಸಿದವರು. ಇವರ ವಿಜ್ಞಾನ ಸೇವೆಗಾಗಿ ಭಾರತ ಸರ್ಕಾರ ಎಲ್ಲ ಪದ್ಮ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 
ಮೆನನ್ ಅವರು ಯೋಜನಾ ಆಯೋಗದ ಸದಸ್ಯ (೧೯೮೨-೮೯), ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹೆಗಾರ (೧೯೮೬-೧೯೮೯), ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ ಎಸ್ ಐ ಆರ್) ನ ಉಪಾಧ್ಯಕ್ಷ (೧೯೮೯-೯೦) ಮತ್ತು ರಾಜ್ಯಸಭಾ ಸದಸ್ಯರಾಗಿ (೧೯೯೦-೯೬) ಕೂಡ ಸೇವೆ ಸಲ್ಲಿಸಿದ್ದಾರೆ. 
ಲಂಡನ್ನಿನ ರಾಯಲ್ ಸೊಸೈಟಿ ಹಾಗು ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ನ ಫೆಲೋ ಗೌರವ ಕೂಡ ಮೆನನ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com