ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ಗೆ ಚಾಲನೆ

ಭಾರತೀಯ ನೌಕಾದಳದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ಗೆ ಸೆ.17 ರಂದು ಚಾಲನೆ ನೀಡಲಾಗಿದೆ.
ಐಎನ್ಎಸ್ ಮೊರ್ಮುಗಾವೋ
ಐಎನ್ಎಸ್ ಮೊರ್ಮುಗಾವೋ

ಮುಂಬೈ: ಭಾರತೀಯ ನೌಕಾದಳದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ಗೆ  ಸೆ.17 ರಂದು ಚಾಲನೆ ನೀಡಲಾಗಿದೆ.  

ಮಜಗಾಂವ್ ಡಾಕ್ ಲಿಮಿಟೆಡ್ (ಎಂಡಿಎಲ್) ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್  ಮೊರ್ಮುಗಾವೋ ನ್ನು ತಯಾರಿಸಿದ್ದು, ಶೇ.60 ರಷ್ಟು ಸ್ವದೇಶೀ ನಿರ್ಮಿತವಾಗಿದೆ. ರಹಸ್ಯವಾಗಿ ಕಾರ್ಯಾಚರಿಸುವ ವ್ಯವಸ್ಥೆ ಹೊಂದಿರುವ ಮೊರ್ಮುಗಾವೊ ಯುದ್ಧ ನೌಕೆಯನ್ನು ₹7,000 ಕೋಟಿ ವೆಚ್ಚದಲ್ಲಿ 15ಬಿ ಯೋಜನೆ ಅಡಿ ನಿರ್ಮಿಸಲಾಗಿದ್ದು ನೌಕೆಯು 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ.

163.2 ಮೀಟರ್ ಉದ್ದ, 7, 300 ಟನ್ ತೂಕವಿರುವ ಐಎನ್ಎಸ್ ಮೊರ್ಮುಗಾವೋ ಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ನೌಕಾ ಪಡೆಯ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. 149 ಮೀಟರ್ ಉದ್ದ, 30 ನಾಟ್ ಗರಿಷ್ಠ ವೇಗ ಹಾಗೂ 4,000 ನಾಟಿಕಲ್ ಮೈಲಿ ಸಾಮರ್ಥ್ಯವನ್ನು ಐಎನ್‌ಎಸ್ ಮೊರ್ಮುಗಾವೊ ಹೊಂದಿದೆ. 15 ಬಿ ಯೋಜನೆಯಡಿ ನಾಲ್ಕು  ಕ್ಷಿಪಣಿ ನಾಶಕ ಯುದ್ಧ ನೌಕೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು 2020-2024 ರ ವೇಳೆಗೆ ತಯಾರಾಗಲಿವೆ ಎಂದು ನೌಕಾಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com