500 ಮಿಲಿಯನ್ ಯಾಹೂ ಖಾತೆಗಳು ಹ್ಯಾಕ್!

ಯಾಹೂ ಸಂಸ್ಥೆಯ ಇತಿಹಾಸದಲ್ಲಿಯೇ ಬೃಹತ್ ಭದ್ರತಾ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಂಸ್ಥೆಯ ಸುಮಾರು 500 ಮಿಲಿಯನ್ ಖಾತೆದಾರರ ಮಾಹಿತಿಯನ್ನು ಕದಿಯಲಾಗಿದೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.
ಯಾಹೂ ಹ್ಯಾಕ್ (ಸಂಗ್ರಹ ಚಿತ್ರ)
ಯಾಹೂ ಹ್ಯಾಕ್ (ಸಂಗ್ರಹ ಚಿತ್ರ)

ಸ್ಯಾನ್ ಫ್ರಾನ್ಸಿಸ್ಕೋ: ಯಾಹೂ ಸಂಸ್ಥೆಯ ಇತಿಹಾಸದಲ್ಲಿಯೇ ಬೃಹತ್ ಭದ್ರತಾ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದ್ದು, ಸಂಸ್ಥೆಯ ಸುಮಾರು 500 ಮಿಲಿಯನ್ ಖಾತೆದಾರರ ಮಾಹಿತಿಯನ್ನು  ಕದಿಯಲಾಗಿದೆ ಎಂದು ಯಾಹೂ ಸಂಸ್ಥೆ ಹೇಳಿಕೊಂಡಿದೆ.

ಪ್ರಾಯೋಜಿತ ಹ್ಯಾಕರ್ ಗಳ ತಂಡವೊಂದು ಈ ಬೃಹತ್ ಹ್ಯಾಕಿಂಗ್ ನಲ್ಲಿ ತೊಡಗಿರುವ ಕುರಿತು ಯಾಹೂ ಸಂಸ್ಥೆ ಶಂಕೆ ವ್ಯಕ್ತಪಡಿಸಿದ್ದು, ಸಂಸ್ಥೆಯ ಮೂಲಗಳ ಪ್ರಕಾರ 2014ರಿಂದೀಚೆಗೆ ಪಾಸ್  ವಕ್ಡ್ ಬದಲಾಯಿಸದ ಖಾತೆದಾರರ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಖಾತೆದಾರರ ಹೆಸರು, ಮೊಬೈಲ್ ಸಂಖ್ಯೆ, ಈ ಮೇಲ್ ವಿಳಾಸ, ಜನ್ಮ ದಿನಾಂಕ, ಭದ್ರತಾ  ಪ್ರಶ್ನೆ, ಹಾಗೂ ಪಾಸ್ ವರ್ಡ್ ಗಳು ಹ್ಯಾಕ್ ಆಗಿರುವ ಕುರಿತು ಸಂಸ್ಥೆ ಶಂಕೆ ವ್ಯಕ್ತಪಡಿಸಿದೆ.

ಹೀಗಾಗಿ ಕೂಡಲೇ 2014ರಿಂದೀಚೆಗೆ ಪಾಸ್ ವರ್ಡ್ ಬಲಾವಣೆ ಮಾಡದ ಖಾತೆದಾರರು ಈ ಕೂಡಲೇ ತಮ್ಮ ಖಾತೆಗಳ ಪಾಸ್ ವರ್ಡ್ ಬದಲಿಸಬೇಕು ಎಂದು ಮನವಿ ಮಾಡಿಕೊಂಡಿದೆ.

ಈಗಾಗಲೇ ಯಾಹೂ ಖಾತೆದಾರರು ಜಿಮೇಲ್ ನತ್ತ ವಲಸೆ ಬರುತ್ತಿದ್ದು, ಪ್ರಸ್ತುತ ಭದ್ರತಾ ಉಲ್ಲಂಘನೆ ಪ್ರಕರಣ ಯಾಹೂ ಸಂಸ್ಥೆಗೆ ಪ್ರಮುಖ ಹೊಡೆತವಾಗಿ ಪರಿಣಮಿಸುವುದರಲ್ಲಿ ಎರಡು  ಮಾತಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com