ಪೃಥ್ವಿ ಡಿಫೆನ್ಸ್ ವೆಹಿಕಲ್ ಪರೀಕ್ಷೆ ಯಶಸ್ವಿ: ಮತ್ತೊಂದು ಮೈಲಿಗಲ್ಲು ಸಾಧಿಸಿದ ಭಾರತ

ದ್ವಿಸ್ತರಗಳ ಪ್ರಕ್ಷೇಪಕ ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಂಡಿದ್ದು ರಾಷ್ಟ್ರೀಯ ರಕ್ಷಣೆಯ ಕ್ಷಿಪಣಿ ಪರೀಕ್ಷೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಪೃಥ್ವಿ ಡಿಫೆನ್ಸ್ ವೆಹಿಕಲ್
ಪೃಥ್ವಿ ಡಿಫೆನ್ಸ್ ವೆಹಿಕಲ್
ಒಡಿಶಾ: ದ್ವಿಸ್ತರಗಳ ಪ್ರಕ್ಷೇಪಕ ಕ್ಷಿಪಣಿಯ ಪರೀಕ್ಷೆ ಯಶಸ್ವಿಗೊಂಡಿದ್ದು  ರಾಷ್ಟ್ರೀಯ ರಕ್ಷಣೆಯ ಕ್ಷಿಪಣಿ ಪರೀಕ್ಷೆಯಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. 
ಪೃಥ್ವಿ ಡಿಫೆನ್ಸ್ ವೆಹಿಕಲ್( ಪಿಡಿವಿ)ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಪಿಡಿವಿ ವ್ಯವಸ್ಥೆ ರಕ್ಷಣಾ ಸೇವೆಗೆ ನಿಯೋಜಿಸಲು ಸಿದ್ಧವಾಗಿದೆ ಎಂದು ತಿಳಿಸಿದೆ. 
ಒಡಿಶಾದ ಅಬ್ದುಲ್ ಕಲಾಮ್ ಐಲ್ಯಾಂಡ್ (ವೀಲ್ಹರ್ ದ್ವೀಪ)ದಿಂದ ಪೃಥ್ವಿ ಡಿಫೆನ್ಸ್ ವೆಹಿಕಲ್ ನ್ನು ಪರೀಕ್ಷಾರ್ಥ ಪ್ರಯೋಗ ಮಾಡಲಾಗಿದೆ. 
ಶತ್ರು ರಾಷ್ಟ್ರಗಳು ಭಾರತದತ್ತ ಪ್ರಯೋಗಿಸುವ ಖಂಡಾಂತರ ಕ್ಷಿಪಣಿಯನ್ನು ಸುಮಾರು 2 ಸಾವಿರ ಕಿ.ಮೀ ದೂರದಲ್ಲೇ ಗುರುತಿಸಿ, ಧ್ವಂಸ ಮಾಡುವ ಸಾಮರ್ಥ್ಯವನ್ನು ಪೃಥ್ವಿ ಡಿಫೆನ್ಸ್ ವೆಹಿಕಲ್ ವ್ಯವಸ್ಥೆ ಹೊಂದಿದೆ. 
ಲಾಂಚರ್ ತಯಾರಾಗಿದ್ದು ಬೆಳಗಾವಿಯಲ್ಲಿ
ಒಡಿಶಾದಲ್ಲಿ ಪರೀಕ್ಷೆ ಮಾಡಲಾದ ಪ್ರತಿಬಂಧಕ ಕ್ಷಿಪಣಿ ಲಾಂಚರ್‌ ನ್ನು ಬೆಳಗಾವಿಯ ಸರ್ವೊಕಂಟ್ರೊಲ್ಸ್‌ ಏರೊಸ್ಪೇಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ತಯಾರಿಸಲಾಗಿದೆ ಎಂಬುದು ವಿಶೇಷ. ಸಂಸ್ಥೆಯ ಹೈಡ್ರಾಲಿಕ್‌ ಎಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದಿಂದ, ಕ್ಷಿಪಣಿ ಉಡಾವಣೆಗೆ ಅಗತ್ಯವಾದ ಲಾಂಚರ್‌ ಅನ್ನು 6 ತಿಂಗಳಲ್ಲಿ ಸಿದ್ಧಪಡಿಸಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com