'ಫೇಸ್ ಸ್ವಾಪ್' ಆಪ್ ಬಿಡುಗಡೆ ಮಾಡಿದ ಮೈಕ್ರೊಸಾಫ್ಟ್

ವಿಭಿನ್ನ ದೃಶ್ಯಗಳಿಗೆ ಮತ್ತು ವಿಭಿನ್ನ ಪಾತ್ರಗಳಿಗೆ ನಿಮ್ಮ ಮುಖವನ್ನು ಅಂಟಿಸಿಕೊಳ್ಳಲು ಅನುವುಮಾಡಿಕೊಡುವ 'ಫೇಸ್ ಸ್ವಾಪ್' ಆಪ್ ಅನ್ನು ಮೈಕ್ರೊಸಾಫ್ಟ್ ಸಂಸ್ಥೆ ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ವಿಭಿನ್ನ ದೃಶ್ಯಗಳಿಗೆ  ಮತ್ತು ವಿಭಿನ್ನ ಪಾತ್ರಗಳಿಗೆ ನಿಮ್ಮ ಮುಖವನ್ನು ಅಂಟಿಸಿಕೊಳ್ಳಲು ಅನುವುಮಾಡಿಕೊಡುವ 'ಫೇಸ್ ಸ್ವಾಪ್' ಆಪ್ ಅನ್ನು ಮೈಕ್ರೊಸಾಫ್ಟ್ ಸಂಸ್ಥೆ ಬಿಡುಗಡೆ ಮಾಡಿದೆ. 
'ಫೇಸ್ ಸ್ವಾಪ್' ಸದ್ಯಕ್ಕೆ ಗೂಗಲ್ ಪ್ಲೇಸ್ಟೋರ್ ನಲ್ಲಿ ಲಭ್ಯವಿದ್ದು, ಶೀಘ್ರದಲ್ಲಿಯೇ ಆಪಲ್ ಐ ಒ ಎಸ್ ಗೆ ಕೂಡ ಲಭ್ಯವಾಗಲಿದೆ. ಯಾರಾದರೂ ಫ್ಯಾಶನ್ ರೂಪದರ್ಶಿ ಅಥವಾ ಖಗೋಳಶಾಸ್ತ್ರಜ್ಞ ಹೀಗೆ ವಿವಿಧ ವ್ಯಕ್ತಿಗಳ ಮುಖವನ್ನು ಬದಲಿಸಲು ಅವಕಾಶ ನೀಡುವ ಈ ಆಪ್, ಮೈಕ್ರೊಸಾಫ್ಟ್ ಸಂಸ್ಥೆಯ ಬಿಂಗ್ ಸರ್ಚ್ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಸಿ ಎನ್ ಇ ಟಿ ಮಂಗಳವಾರ ವರದಿ ಮಾಡಿದೆ. 
ಈ ಆಪ್ ಬಳಸಲು, ಮೊದಲು ಸೆಲ್ಫಿ ಬಳಸಿ ಫೋಟೋ ಕ್ಲಿಕ್ ಮಾಡಬೇಕಿದೆ. ನಂತರ 'ಫೇಸ್ ಸ್ವಾಪ್' ಆಪ್ ಅದರಿಂದ ಮುಖವನ್ನು ಬೇರ್ಪಡಿಸಿ, ಇತರ ಚಿತ್ರಗಳಿಗೆ-ವ್ಯಕ್ತಿಗಳಿಗೆ ಅದನ್ನು ಅಂಟಿಸಲು ನೆರವಾಗುತ್ತದೆ.
ಇದೆ ಆಪ್ ನಲ್ಲಿ ಅಂತರ್ಜಾಲದಲ್ಲಿ ವಿವಿಧ ಫೋಟೋಗಳನ್ನು ಹುಡುಕಲು ಸರ್ಚ್ ಅವಕಾಶ ಕೂಡ ನೀಡಲಾಗಿದೆ. ನಂತರ ಮುಖ ಬದಲಿಸಿ, ಆ ಫೋಟೋ ಉಳಿಸಿಕೊಳ್ಳುವ ಅಥವಾ ವಿವಿಧ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಅವಕಾಶವನ್ನು ಕೂಡ ಆಪ್ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com