ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ಗೆ ಶೇ.30 ರಷ್ಟು ಲಾಭ ಸಾಧ್ಯತೆ

ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಗೆ ಶೇ.30 ರಷ್ಟು ಲಾಭ ಬರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸ್ಯಾಮ್ ಸಂಗ್
ಸ್ಯಾಮ್ ಸಂಗ್
ಸೊಯೋಲ್: ವರ್ಷದ ಮೊದಲ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಗೆ ಶೇ.30 ರಷ್ಟು ಲಾಭ ಬರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಮಾರುಕಟ್ಟೆ ಅನ್ವೇಷಕ ಫನ್ ಗೈಡ್ ಪ್ರಕಾರ ಸ್ಯಾಮ್ ಸಂಗ್ ಜನವರಿ-ಮಾರ್ಚ್ ತಿಂಗಳಲ್ಲಿ 7.5 ಬಿಲಿಯನ್ ನಷ್ಟು ಲಾಭ ಗಳಿಸುವ ಸಾಧ್ಯತೆ ಇದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕಿಂತ ಶೇ.30.6 ರಷ್ಟು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಹೆಚ್ಚಿನ ಡಾಟಾ ಸಂಗ್ರಹ ಸಾಮರ್ಥ್ಯವುಳ್ಳ ಉಪಕರಣಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮೂರು ತಿಂಗಳ ಅವಧಿಯಲ್ಲಿ 5 ಟ್ರಿಲಿಯನ್ ವನ್( ದಕ್ಷಿಣ ಕೊರಿಯಾದ ಕರೆನ್ಸಿ) ಯನ್ನು ದಾಟಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸ್ಯಾಮ್ ಸಂಗ್ ಕಂಪ್ಯೂಟರ್ ಮೆಮೊರಿ ಚಿಪ್ ನ ವಿಶ್ವದ ಅತಿ ದೊಡ್ಡ ಉತ್ಪಾದಕ ಸಂಸ್ಥೆಯಾಗಿದ್ದು, ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಗ್ಯಾಲೆಕ್ಸಿ ನೋಟ್ 7 ಸ್ಮಾರ್ಟ್ ಫೋನ್ ನ್ನು ವಾಪಸ್ ಪಡೆದಿರುವುದರ ಪರಿಣಾಮಗಳಿಂದ ಹೊರಬರಲು ಇಂದಿಗೂ ಸಾಧ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com