ಆ್ಯಪಲ್, ಸ್ಯಾಮ್ ಸಂಗ್ ಗೆ ಸಡ್ಡು; ಆ್ಯಂಡ್ರಾಯ್ಡ್ ಸಹ ಸಂಸ್ಥಾಪಕನಿಂದಲೇ ಹೊಸ ಸ್ಮಾರ್ಟ್ ಫೋನ್!

ಖ್ಯಾತ ಸ್ಮಾರ್ಟ್ ಫೋನ್ ಒಎಸ್ ಆಂಡ್ರಾಯ್ಡ್ ಸಹ ಸಂಸ್ಥಾಪಕನೆಂದೇ ಖ್ಯಾತಿಗಳಿಸಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ಸ್ಮಾರ್ಟ್ ಫೋನ್ ಒಎಸ್ ಆಂಡ್ರಾಯ್ಡ್ ಸಹ ಸಂಸ್ಥಾಪಕನೆಂದೇ ಖ್ಯಾತಿಗಳಿಸಿರುವ ಆ್ಯಂಡಿ ರುಬಿನ್ ಅವರು ಹೊಸ ಸ್ಮಾರ್ಟ್ ಫೋನ್ ಒಂದನ್ನು ಹೊರತಂದಿದ್ದಾರೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಧಿಪತಿಗಳಾಗಿ ಮೆರೆಯುತ್ತಿರುವ ಆ್ಯಪಲ್ ಮತ್ತು ಸ್ಯಾಮ್ ಸಂಗ್ ಸಂಸ್ಥೆಗಳಿಗೆ ಇದೀಗ ಪ್ರಮುಖ ಪ್ರತಿಸ್ಪರ್ದಿ ಹುಟ್ಟುಕೊಂಡಿದ್ದು, ಆ್ಯಂಡ್ರಾಯ್ಡ್ ಸಹ ಸಂಸ್ಥಾಪಕ ಆ್ಯಂಡಿ ರುಬಿನ್ "ಎಸೆಂನ್ಶಿಯಲ್"  ಎಂಬ ಹೆಸರಿನ ಈ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. "ಎಸೆಂನ್ಶಿಯಲ್" ಒಂದು ಮೊಡ್ಯುಲರ್ ಫೋನ್ ಆಗಿದ್ದು, ಹೆಚ್ಚುವರಿ ಅಟ್ಯಾಚ್ ಮೆಂಟುಗಳಾದ 360 ಡಿಗ್ರಿ ಕ್ಯಾಮೆರಾ ಮತ್ತು ಚಾರ್ಜಿಂಗ್ ಡಾಕ್  ಹೊಂದಿರಲಿದೆ ರುಬಿನ್ ವಕ್ತಾರರು ತಿಳಿಸಿದ್ದಾರೆ.

ರುಬಿನ್ ಸಂಸ್ಥೆ ತಿಳಿಸಿರುವಂತೆ ಈ ಹೊಸ ಸ್ಮಾರ್ಟ್ ಫೋನ್ 5.7 ಇಂಚಿನ ಕ್ಯೂಹೆಚ್ ಡಿ (2560x1312) ಬೆಝೆಲ್-ಲೆಸ್ ಡಿಸ್ ಪ್ಲೇ ವ್ಯವಸ್ಥೆ ಹೊಂದಿದ್ದು, ಈ ಎಡ್ಜ್ ಟು ಎಡ್ಜ್ ಡಿಸ್ ಪ್ಲೇ ನಲ್ಲಿ ಕೇವಲ ಒಂದು ಸೆಲ್ಫೀ ಶೂಟರ್ ಮಾತ್ರ  ಕಾಣಿಸುತ್ತದೆಯಂತೆ. ಅಂತೆಯೇ ಈ ಫೋನ್ ನ ಡಿಸ್ ಪ್ಲೇ ನಲ್ಲಿ ಹೋಂ ಬಟನ್ ಆಯ್ಕೆಯನ್ನು ತೆಗೆಯಲಾಗಿದ್ದು, ಅದರ ಬದಲು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹಿತ ಹೋಂ ಬಟನ್ ಫೋನಿನ ಹಿಂಬದಿಯಲ್ಲಿ ಇರಲಿದೆಯಂತೆ. ಡಿಸ್  ಪ್ಲೇ ಪರಿಣಾಮಕಾರಿ ಕಾರ್ಯಚಲನೆಗೆ ಹೀಗೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಂತೆಯೇ ಟೆಟಾನಿಯಂ ಹಾಗೂ ಸೆರಾಮಿಕ್ ಉಪಯೋಗಿಸಿ ತಯಾರಿಸಲಾಗಿರುವ ಈ ಫೋನ್ ಇತರ ಬ್ರ್ಯಾಂಡುಗಳ ಸ್ಮಾರ್ಟ್ ಫೋನ್  ಗಳಿಗಿಂತ ಹೆಚ್ಚಿಗೆ ಬಾಳಿಕೆ ಬರುತ್ತದೆ ಎಂದು ತಯಾರಕರು ತಿಳಿಸಿದ್ದಾರೆ.

ಫೋನಿನ ಸ್ಪೆಸಿಫಿಕೇಶನ್ಸ್ ಕೂಡ ಉತ್ತಮವಾಗಿದ್ದು,  "ಎಸೆಂನ್ಶಿಯಲ್" ಫೋನ್ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್, 4 ಜಿಬಿ ರ‍್ಯಾಮ್ ಹಾಗೂ 128ಜಿಬಿ ಇಂಟರ್ನ್ಲ್ ಸ್ಟೋರೇಜ್ ಹೊಂದಿದೆ. "ಎಸೆಂನ್ಶಿಯಲ್" ಫೋನಿನಲ್ಲಿ 13  ಮೆಗಾ ಪಿಕ್ಸೆಲ್ ಸಾಮರ್ಥ್ಯದ ಎರಡು ಬ್ಯಾಕ್ ಕ್ಯಾಮರಾ ಇದ್ದರೆ, ಸೆಕೆಂಡರಿ ಲೆನ್ಸ್ ಒಂದು ಕಪ್ಪು ಬಿಳುಪಿನ ಸೆನ್ಸರ್ ಆಗಿದೆ. ಫ್ರಂಟ್ ಕ್ಯಾಮರಾ ಸಾಮರ್ಥ್ಯ 8 ಮೆಗಾ ಪಿಕ್ಸೆಲ್ ಇದ್ದು, ಇದರಲ್ಲಿ 4ಕೆ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಕೂಡ   ಇದೆ. ಆದರೆ ಎಸೆಂಶಿಯಲ್ ಫೋನಿನಲ್ಲಿ 3.55 ಎಂಎಂ ಹೆಡ್ ಫೋನ್ ಜ್ಯಾಕ್ ಇಲ್ಲವಾಗಿದ್ದು, ಕಂಪೆನಿಯು ಫೋನಿನೊಂದಿಗೆ ಹೆಡ್ ಫೋನ್ ಡಾಂಗಲ್ ಕೂಡ ಗ್ರಾಹಕರಿಗೆ ನೀಡಲಾಗುವುದೆಂದು ಹೇಳಿಕೊಂಡಿದೆ.

ಆಂಡ್ರಾಯ್ಡ್ ಮೂಲಕ ಕಾರ್ಯಾಚರಿಸುವ ಈ ಸ್ಮಾರ್ಟ್ ಫೋನ್ ಪ್ರಸ್ತುತ ಅಮೆರಿಕಾದಲ್ಲಿ ಮಾತ್ರ ಲಭ್ಯವಿದ್ದು ಅದರ ಬೆಲೆ 699 ಡಾಲರ್ (ಅಂದಾಜು ರು. 45,202) ಆಗಿರುತ್ತದೆ ಎಂದು ಹೇಳಲಾಗುತ್ತಿದೆ. 360 ಡಿಗ್ರಿ ಕ್ಯಾಮರಾದೊಂದಿಗೆ  ಈ ಫೋನಿನ ಬೆಲೆ 749 ಡಾಲರ್ (ಅಂದಾಜು ರು.48,437) ಆಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸ್ಯಾಮ್ ಸಂಗ್ ಮತ್ತು ಆ್ಯಪಲ್ ಸಂಸ್ಥೆಗಳ ದುಬಾರಿ ಸ್ಮಾರ್ಟ್ ಫೋನ್ ಗಳು ಹೊಂದಿರುವ ಬಹುತೇಕ ಎಲ್ಲ ವೈಶಿಷ್ಟ್ಯಗಳನ್ನು ಈ  "ಎಸೆಂನ್ಶಿಯಲ್" ಫೋನ್ ಹೊಂದಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com