ಫೇಸ್ಬುಕ್ ನಲ್ಲಿ ನಿಂದನಾತ್ಮಕ ಬರಹಕ್ಕೆ ಲೈಕ್; ವ್ಯಕ್ತಿಗೆ ದಂಡ ವಿಧಿಸಿದ ಸ್ವಿಸ್ ನ್ಯಾಯಾಲಯ

ಫೇಸ್ಬುಕ್ ನಲ್ಲಿ ವಿವಾದಾತ್ಮಕ ಬರಹಕ್ಕೆ ಲೈಕ್ ಒತ್ತುವ ಮುಂಚೆ ಎಚ್ಚರದಿಂದಿರಿ. ಇದು ನಿಮಗೆ ಸಮಸ್ಯೆಯನ್ನು ಒಡ್ಡಬಹುದು! ಹೌದು ಇಂತಹ ಮೊದಲ ಪ್ರಕರಣದಲ್ಲಿ ಸ್ವಿಟ್ಸರ್ ಲ್ಯಾಂಡ್ ನ್ಯಾಯಾಲಯದ ನ್ಯಾಯಮೂರ್ತಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಫೇಸ್ಬುಕ್ ನಲ್ಲಿ ವಿವಾದಾತ್ಮಕ ಬರಹಕ್ಕೆ ಲೈಕ್ ಒತ್ತುವ ಮುಂಚೆ ಎಚ್ಚರದಿಂದಿರಿ. ಇದು ನಿಮಗೆ ಸಮಸ್ಯೆಯನ್ನು ಒಡ್ಡಬಹುದು! ಹೌದು ಇಂತಹ ಮೊದಲ ಪ್ರಕರಣದಲ್ಲಿ ಸ್ವಿಟ್ಸರ್ ಲ್ಯಾಂಡ್ ನ್ಯಾಯಾಲಯದ ನ್ಯಾಯಮೂರ್ತಿ ನಿಂದನಾತ್ಮಕ ಎಂದು ಪರಿಗಣಿಸಿದ ಫೇಸ್ಬುಕ್ ಬರಹಕ್ಕೆ ಮೆಚ್ಚಿ ಲೈಕ್ ಒತ್ತಿದ ವ್ಯಕ್ತಿಗೆ ೪೦೦೦ ಡಾಲರ್ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. 
ಮಂಗಳವಾರ ರಾತ್ರಿ ಫಾರ್ಚುನ್ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ಪ್ರಾಣಿ ಹಕ್ಕುಗಳ ಸಂಘವನ್ನು ಮುನ್ನಡೆಸುವ ಎರ್ವಿನ್ ಕೆಸ್ಲರ್ ಅವರ ಬರಹಕ್ಕೆ ನೀಡಿದ್ದ ಪ್ರತಿಕ್ರಿಯೆಗಳು ಜನಾಂಗೀಯ ನಿಂದನೆಯಿಂದ ಕೂಡಿದ್ದವು. ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಆ ಪೋಸ್ಟ್ ನ ಕೆಲವು ಪ್ರತಿಕ್ರಿಯೆಗಳ ಮೇಲೆ ಲೈಕ್ ಒತ್ತಿದ್ದನ್ನು ನ್ಯಾಯಾಲಯ ಖಂಡಿಸಿ ಶಿಕ್ಷೆಗೆ ಒಳಪಡಿಸಿದೆ. ಆ ವ್ಯಕ್ತಿಯ ಹೆಸರನ್ನು ಕೋರ್ಟ್ ಬಹಿರಂಗಗೊಳಿಸಿಲ್ಲ. 
ಲೈಕ್ ಒತ್ತುವ ಮೂಲಕ ನಿಂದನಾತ್ಮಕ ಬರಹವನ್ನು ಆ ವ್ಯಕ್ತಿ ಅನುಮೋದಿಸಿರುವುದಾಗಿ ನ್ಯಾಯಾಲಯ ಹೇಳಿದೆ. 
ಪ್ರತಿಕ್ರಿಯೆಗಳ ಮೇಲೆ ಲೈಕ್ ಒತ್ತಿದ್ದಕ್ಕೆ ಈವರೆಗೂ ಯಾರಿಗೂ ದಂಡ ಹಾಕಿಲ್ಲ ಎಂದು ಆಪಾದಿತನ ಪರ ವಕೀಲ ವಾದ ಮಾಡಿದ್ದರು ಇದಕ್ಕೆ ಒಪ್ಪದ ನ್ಯಾಯಮೂರ್ತಿ "ಹೀಗೆ ಮಾಡುವ ಮೂಲಕ ಆ ಪ್ರತಿಕ್ರಿಯೆಗಳನ್ನು ಹೆಚ್ಚು ಜನರಿಗೆ ತಲುಪಿಸಲು ಆ ವ್ಯಕ್ತಿ ಸಹಕರಿಸಿದ್ದಾನೆ" ಎಂದಿದ್ದಾರೆ. ಲೈಕ್ ಒತ್ತಿದ ನಂತರ ಅದನ್ನು ಆ ವ್ಯಕ್ತಿಯನ್ನು ಅನುಸರಿಸುವವರಿಗೆ, ಬೆಂಬಲಿಗರಿಗೆ ಕಾಣುವಂತೆ ಫೇಸ್ಬುಕ್ ಮಾಡುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com