ಸೌರ ಮಂಡಲದ ಹೊಸ ಅತಿಥಿ ಒಮುಮಾಮುವಾ! ನಾಸಾ ವಿಜ್ಞಾನಿಗಳಿಂದ ಪತ್ತೆ

ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1........
ಒಮುಮಾಮುವಾ
ಒಮುಮಾಮುವಾ
ವಾಷಿಂಗ್ ಟನ್: ಸೌರ ಮಂಡಲಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಅದೊಂದು ಕ್ಷುದ್ರಗ್ರಹವಾಗಿದ್ದು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ವಿಜ್ಞಾನಿಗಳು 'ಕ್ಷುದ್ರಗ್ರಹ 1I/2017 U1 ಅಥವಾ ಒಮುಮಾಮುವಾ ಎಂದು ಹೆಸರಿಸಿದ್ದಾರೆ. ಹವಾಯಿ ಭಾಷೆಯಲ್ಲಿ 'ಒಮುಮಾಮುವಾ' ಎಂದರೆ  'ಬಹಳ ದೂರದಿಂದ ಬಂದ ಪ್ರಥಮ ಸಂದೇಶ' ಎಂದು  ಅರ್ಥವಿದೆ.
ವಿಜ್ಞಾನಿಗಳು ಹೇಳುವಂತೆ ನಮ್ಮ ಸೌರ ಮಂಡಲದೊಳಕ್ಕೆ ಬೇರೆ ಸೌರ ಮಂಡಲದಿಂದ ಬಂದ ಮೊದಲ ಕ್ಷುದ್ರಗ್ರಹ ಇದು. ಈ ಕಾರಣಕ್ಕೆ ವಿಜ್ಞಾನಿಗಳು ಇದರ ಕುರಿತಂತೆ ಸಾಕಷ್ಟು ಕುತೂಹಲ ಬೆಳೆಸಿಕೊಂಡಿದ್ದಾರೆ. 
ವೈಜ್ಞಾನಿಕವಾಗಿ ಇದೊಂದು ಮಹತ್ವದ ಸಂಶೋಧನೆ ಎಂದಿರುವ ನಾಸಾ ಮತ್ತೊಂದು ಸೌರಮಂಡಲದಿಂದ ಪ್ರತ್ಯೇಕವಾಗಿ ಸಾವಿರಾರು ವರ್ಷಗಳ ಕಾಲ ಕ್ರಮಿಸಿ ಬಂದಿರುವ ಈ ಕ್ಷುದ್ರಗ್ರಹ 400 ಮೀಟರ್ ಉದ್ದ, 40 ಮೀಟರ್ ಅಗಲವಾಗಿದೆ. ವಿಚಿತ್ರ ಆಕಾರದಿಂದ ಕೂಡಿರುವ ಇದನ್ನು ಅ.19 ರಂದು ಹವಾಯಿಯಲ್ಲಿನ AN STARRS1 ದೂರದರ್ಶಕದ ಮೂಲಕ ಗುರುತಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com