ಕರಾಳ ಶುಕ್ರವಾರದಂದು ದಾಖಲೆಯ ಪ್ರಮಾಣದಲ್ಲಿ ಸ್ಮಾರ್ಟ್ ಫೋನ್ ಮಾರಾಟ

ಕರಾಳ ಶುಕ್ರವಾರದಂದು ಅಮೆರಿಕಾದಲ್ಲಿ ದಾಖಲೆ ಪ್ರಮಾಣದ ಸ್ಮಾರ್ಟ್ ಫೋನ್ ಮಾರಾಟವಾಗಿದೆ.
ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್
ಸ್ಯಾನ್ ಫ್ರಾನ್ಸಿಸ್ಕೊ: ಕರಾಳ ಶುಕ್ರವಾರದಂದು ಅಮೆರಿಕಾದಲ್ಲಿ ದಾಖಲೆ ಪ್ರಮಾಣದ ಸ್ಮಾರ್ಟ್ ಫೋನ್ ಮಾರಾಟವಾಗಿದೆ. 
ಅಡೋಬ್ ಡಿಜಿಟಲ್ ನ ಅಂಕಿ-ಅಂಶಗಳ ಪ್ರಕಾರ ಮೊಬೈಲ್ ಮಾರಾಟ ದಾಖಲೆಯ ಮಟ್ಟ ತಲುಪಿದೆ. ನವೆಂಬರ್ ನ 4 ನೇ ಗುರುವಾರದಂದು ಥ್ಯಾಂಕ್ಸ್ ಗಿವಿಂಗ್ ಡೇ ಆಚರಣೆ ಮಾಡಲಾಗುತ್ತದೆ. ಮರುದಿನ ಬರುವ ಶುಕ್ರವಾರವನ್ನು ಕರಾಳ ಶುಕ್ರವಾರ (ಬ್ಲಾಕ್ ಫ್ರೈಡೆ) ಎಂದು ಆಚರಣೆ ಮಾದಲಾಗುತ್ತದೆ. ಈ ರಜೆಯ ದಿನಗಳಲ್ಲಿ ಮೊಬೈಲ್ ಖರೀದಿ ಹೆಚ್ಚಾಗಿದ್ದು, ದಾಖಲೆಯ ಪ್ರಮಾಣದಲ್ಲಿ ಮೊಬೈಲ್ ಫೋನ್ ಗಳು ಮಾರಾಟವಾಗಿವೆ ಎಂದು ಆಡೋಬ್ ಮಾರ್ಕೆಟಿಂಗ್ ಹಾಗೂ ಕಸ್ಟಮರ್ ಇನ್ಸೈಟ್ಸ್ ವಿಭಾಗ ನೀಡಿರುವ ಅಂಕಿ-ಅಂಶಗಳನ್ನು ಸಿಎನ್ ಬಿಸಿ ವರದಿ ಪ್ರಕಟಿಸಿದೆ. 
ರಜೆ ದಿನಗಳಂದು ಜನರು ಹೆಚ್ಚಾಗಿ ರೀಟೆಲರ್ ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಹಲವು ವರ್ಷಗಳ ನಂತರ ಬ್ಲ್ಯಾಕ್ ಫ್ರೈಡೆ ಯುಕೆ, ಜರ್ಮನಿ, ಫ್ರಾನ್ಸ್, ಇಟಾಲಿ ಯುರೋಪ್ ನಲ್ಲಿಯೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟವನ್ನು ಹೆಚ್ಚಿಸಿದ್ದು, 1.57 ಬಿಲಿಯನ್ ಯುನಿಟ್ ಗಳಷ್ಟು ಸ್ಮಾರ್ಟ್ ಫೋನ್ ಗಳು ಮಾರಾಟವಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com