ಆತ್ಮಹತ್ಯೆ ತಡೆಗೆ ಫೇಸ್ ಬುಕ್ ನಿಂದ ಕೃತಕ ಬುದ್ಧಿಮತ್ತೆ ಟೂಲ್

ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಮತ್ತೊಂದು ಯತ್ನ ನಡೆಸಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್ ಕೃತಕ ಬುದ್ಧಿ ಮತ್ತೆ ಆಧಾರಿತ ಟೂಲ್ ಗಳನ್ನು ಬಿಡುಗಡೆ ಮಾಡಿದೆ.
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ: ಆತ್ಮಹತ್ಯೆಗಳನ್ನು ತಡೆಗಟ್ಟುವುದಕ್ಕೆ ಮತ್ತೊಂದು ಯತ್ನ ನಡೆಸಿರುವ ಸಾಮಾಜಿಕ ಜಾಲತಾಣ ಫೇಸ್ ಬುಕ್ ಕೃತಕ ಬುದ್ಧಿ ಮತ್ತೆ ಆಧಾರಿತ ಟೂಲ್ ಗಳನ್ನು ಬಿಡುಗಡೆ ಮಾಡಿದೆ. 
ಫೇಸ್ ಬುಕ್ ಲೈವ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಯಾರಾದರೂ ಆತ್ಮಹತ್ಯೆಗೆ ಶರಣಾಗುವ ಅಭಿಪ್ರಾಯ ವ್ಯಕ್ತಪಡಿಸುವವರನ್ನು ಗುರುತಿಸುವುದಕ್ಕಾಗಿ ಫೇಸ್ ಬುಕ್ ಕೃತಕ ಬುದ್ಧಿಮತ್ತೆಯ ಟೂಲ್ ಗಳನ್ನು ಬಿಡುಗಡೆ ಮಾಡಿದೆ. 
ಆತ್ಮಹತ್ಯೆಯ ಇಚ್ಛೆಯನ್ನು ವ್ಯಕ್ತಪಡಿಸುತ್ತಿರುವವರನ್ನು ಪತ್ತೆಮಾಡಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸ್ಪಂದಿಸುವಂತೆ ಮಾಡಲು ಈ ಟೂಲ್ ಗಳು ನೆರವಾಗಲಿದ್ದು ಕಾಲ ಕ್ರಮೇಣ ಇಡೀ ವಿಶ್ವಾದ್ಯಂತ ಇವು ಜಾರಿಯಾಗಲಿವೆ ಎಂದು ಫೇಸ್ ಬುಕ್ ತನ್ನ ಬ್ಲಾಗ್ ನಲ್ಲಿ ತಿಳಿಸಿದೆ. 
ಫೇಸ್ ಬುಕ್ ಒಳಗೆ ಹಾಗೂ ಹೊರಗೆ ಸುರಕ್ಷಿತ ಸಮುದಾಯಗಳನ್ನು ನಿರ್ಮಾಣ ಮಾಡುವುದು ಫೇಸ್ ಬುಕ್ ನ ಉದ್ದೇಶವಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com