ಇನ್ನು ಮುಂದೆ ಮೆಸೆಂಜರ್ ಮೂಲಕವೂ ಹಣ ವರ್ಗಾವಣೆ ಸಾಧ್ಯ

ಆನ್ ಲೈನ್ ಪೇಮೆಂಟ್ ಗೇಟ್ ವೇ ಪೇಪಾಲ್ ಅಮೆರಿಕಾದ ಜನತೆಗೆ ಫೇಸ್ ಬುಕ್ ಮೆಸೆಂಜರ್ ನಿಂದ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಿದೆ.
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೋ: ಆನ್ ಲೈನ್ ಪೇಮೆಂಟ್ ಗೇಟ್ ವೇ ಪೇಪಾಲ್ ಅಮೆರಿಕಾದ ಜನತೆಗೆ ಫೇಸ್ ಬುಕ್ ಮೆಸೆಂಜರ್ ನಿಂದ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಿದೆ. 
ಪೇಪಾಲ್ ಖಾತೆಯನ್ನು ಬಳಸಿಕೊಂಡು ಹಣವರ್ಗಾವಣೆ ಮಾಡಬಹುದಾಗಿದ್ದು, ಮೆಸೆಂಜರ್ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯ ಜನತೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಲ್ ಪಾವತಿ, ಕ್ಯಾಬ್ ರೈಟ್, ಅಥವಾ ಸ್ನೇಹಿತರಿಗೆ ಹಣ ನೀಡುವುದು ಇನ್ನು ಮುಂದೆ ಮೆಸೆಂಜರ್ ಮೂಲಕವೂ ಸಾಧ್ಯವಿದೆ ಎಂದು ಪೇಪಾಲ್ ಹೇಳಿದೆ. 
ಕಳೆದ ವರ್ಷ ಇದಕ್ಕಾಗಿ ಫೇಸ್ ಬುಕ್ ಮೆಸೆಂಜರ್ ಪೇಪಾಲ್ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈಗ 2.5 ಮಿಲಿಯನ್ ಗೂ ಹೆಚ್ಚು ಅಮೆರಿಕ ಗ್ರಾಹಕರು ಮೆಸೆಂಜರ್ ಮೂಲಕ ಪೇಪಾಲ್ ಬಳಕೆ ಮಾಡಿಕೊಂಡು ಹಣ ವರ್ಗಾವಣೆ ಮಾಡಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com