ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ತಾಣ ಫೇಸ್ ಬುಕ್ ಈಗ ಹೊಸ ಟೂಲ್ ವೊಂದನ್ನು ಪರಿಚಯಿಸಿದ್ದು, ಅದನ್ನು ಬಳಸಿ ಗ್ರೂಪ್ ಅಡ್ಮಿನ್ ಗಳು ಸದಸ್ಯರ ಕಮೆಂಟ್ ಅನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಬಹುದಾಗಿದೆ.
ಅಡ್ಮಿನ್ ಗಳು ಒಂದು ಕ್ಲಿಕ್ ಮಾಡುವ ಮೂಲಕ ತಮ್ಮ ಸಮುದಾಯದ ನಿಯಮಗಳನ್ನು ಉಲ್ಲಂಘಿಸುವ ಸದಸ್ಯರನ್ನು ಗ್ರೂಪ್ ನಿಂದ ತೆಗೆಯ ಹಾಗೂ ಅವರು ಯಾವುದೇ ಕಮೆಂಟ್ ಮಾಡದಂತೆ ನಿಷೇಧಿಸುವ ಅಧಿಕಾರ ಹೊಂದಿರುವುದಾಗಿ ಇಂದು ಫೇಸ್ ಬುಕ್ ತಿಳಿಸಿದೆ.
ಗ್ರೂಪ್ ಅಡ್ಮಿನ್ ಗಳು ಹೊಸದಾಗಿ ಗ್ರೂಪ್ ಸೇರುವ ಸದಸ್ಯರಿಗೆ ಸ್ವಾಗತ ಪೋಸ್ಟ್ ಅನ್ನು ಹಾಕಲು ಅವಕಾಶ ನೀಡಲಾಗಿದ್ದು, ಈ ಪೋಸ್ಟ್ ಹೊಸದಾಗಿ ಸೇರಿದ ಸದಸ್ಯರಿಗೆ ಆಟೋಮ್ಯಾಟಿಕ್ ಆಗಿ ಟ್ಯಾಗ್ ಆಗುತ್ತದೆ ಎಂದು ಫೇಸ್ ಬುಕ್ ತಿಳಿಸಿದೆ.
ಫೇಸ್ ಬುಕ್ ಪರಿಚಯಿಸಿರುವ ಈ ಹೊಸ ಸಾಧನದಿಂದ ಗ್ರೂಪ್ ನಲ್ಲಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುವಂತಹ ಮತ್ತು ಅಶ್ಲೀಲ ಕಮೆಂಟ್ ಗಳಿಗೆ ಕಡಿವಾಣ ಹಾಕಬಹುದಾಗಿದೆ.