ಬಳಕೆದಾರರ ಡಾಟಾ ಕದಿಯುವುದಕ್ಕೆ ’ಥರ್ಡ್‌ ಪಾರ್ಟಿ’ಗಳಿಂದ ಫೇಸ್ ಬುಕ್ ಲಾಗಿನ್ ದುರುಪಯೋಗ!

ಫೇಸ್ ಬುಕ್ ಬಳಕೆದಾರರ ವಯಸ್ಸು, ಇ-ಮೇಲ್, ಹೆಸರು ಪ್ರೊಫೈಲ್ ಫೋಟೋ ಸೇರಿದಂತೆ ಹಲವು ವೈಯಕ್ತಿಕ ಡಾಟಾ ಕದಿಯುವುದಕ್ಕೆ ಥರ್ಡ್ ಪಾರ್ಟಿಗಳಿಂದ ಫೇಸ್ ಬುಕ್ ಲಾಗಿನ್ ದುರುಪಯೋಗವಾಗುತ್ತಿದೆ
ಫೇಸ್ ಬುಕ್
ಫೇಸ್ ಬುಕ್
ಸ್ಯಾನ್ ಫ್ರಾನ್ಸಿಸ್ಕೊ: ಫೇಸ್ ಬುಕ್ ಬಳಕೆದಾರರ ವಯಸ್ಸು, ಇ-ಮೇಲ್, ಹೆಸರು ಪ್ರೊಫೈಲ್ ಫೋಟೋ ಸೇರಿದಂತೆ ಹಲವು ವೈಯಕ್ತಿಕ ಡಾಟಾ ಕದಿಯುವುದಕ್ಕೆ ಥರ್ಡ್ ಪಾರ್ಟಿಗಳಿಂದ ಫೇಸ್ ಬುಕ್ ಲಾಗಿನ್ ದುರುಪಯೋಗವಾಗುತ್ತಿದೆ ಎಂದು ಹೊಸ ಭದ್ರತಾ ಸಂಶೋಧನಾ ವರದಿ ಎಚ್ಚರಿಸಿದೆ. 
ಥರ್ಡ್ ಪಾರ್ಟಿ ಜಾವಾ ಸ್ಕ್ರಿಪ್ಟ್ ಟ್ರ್ಯಾಕರ್ ಗಳಿಗೆ  ಫೇಸ್ ಬುಕ್ ಡಾಟಾ ಅನುದ್ದೇಶಿತವಾಗಿ ಸಿಗುತ್ತವೆ. ಫಸ್ಟ್ ಪಾರ್ಟಿ ಹಾಗೂ ಥರ್ಡ್ ಪಾರ್ಟಿಯ ನಡುವಿನ ಭದ್ರತಾ ಕ್ರಮಗಳ ಲೋಪದಿಂದಾಗಿ ಥರ್ಡ್ ಪಾರ್ಟಿಗಳು ಫೇಸ್ ಬುಕ್ ಲಾಗಿನ್ ನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಸಾಧ್ಯವಿದೆ ಎಂದು  ಪ್ರಿನ್ಸ್ಟನ್ ಯೂನಿವರ್ಸಿಟಿ ಸೆಂಟರ್ ಫಾರ್ ಇನ್ಫರ್ಮೇಷನ್ ಟೆಕ್ನಾಲಜಿ ಪಾಲಿಸಿಯಲ್ಲಿ ಸಕ್ರಿಯರಾಗಿರುವ ಸ್ಟೀವನ್ ಎಂಗಲ್ಹಾರ್ಡ್ಟ್, ಗನ್ಸ್ ಆಕರ್ ಮತ್ತು ಅರವಿಂದ ನಾರಾಯಣನ್ ತಯಾರಿಸಿರುವ ವರದಿ ಹೇಳಿದೆ.
ತಮ್ಮ ಅಧ್ಯಯನ ವರದಿಯಲ್ಲಿ ಥರ್ಡ್ ಪಾರ್ಟಿ ಸ್ಕ್ರಿಪ್ಟ್ ಗಳು ಡಾಟಾ ಸಂಗ್ರಹಣೆ ಮಾಡುವ ಗೌಪ್ಯ ವಿಧಾನದ ಬಗ್ಗೆ ಬೆಳಕು ಚೆಲ್ಲಿರುವ ಈ ಮೂವರು,  7 ಥರ್ಡ್ ಪಾರ್ಟಿ ಸಂಸ್ಥೆಗಳು ಬಳಕೆದಾರರ ಡಾಟಾ ಕದಿಯುವ ಕೆಲಸದಲ್ಲಿ ತೊಡಗಿದ್ದು, ಮತ್ತೊಂದು ಸಂಸ್ಥೆ ತನ್ನದೇ ಆದ ಫೇಸ್ ಬುಕ್ ಆಪ್ ಮೂಲಕ ವೆಬ್ ಬಳಕೆದಾರರನ್ನು ಟ್ರ್ಯಾಕ್ ಮಾಡುವ ಕೆಲಸದಲ್ಲಿ ತೊಡಗಿದೆ ಎಂದು ಹೇಳಿದೆ. ಭದ್ರತಾ ಲೋಪದ ವರದಿ ಬಗ್ಗೆ ತನಿಖೆ ನಡೆಸುವುದಾಗಿ ಫೇಸ್ ಬುಕ್ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com