ಸಣ್ಣ ಉಪಗ್ರಹ ಲಾಂಚರ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್

ವಿದೇಶಿ ಉಪಗ್ರಹಳನ್ನು ಕಕ್ಷೆಗೆ ಸೇರಿಸಿ ಹಿರಿಮೆ ಹೆಚ್ಚಿಸಿಕೊಂಡಿರುವ ಇಸ್ರೋ ಸಂಸ್ಥೆ ಸಣ್ಣ ಉಪಗ್ರಹ ಲಾಂಚರ್ ಗಳಿಂದ ವಾರ್ಷಿಕ 1,500-2,000 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.
ಸಣ್ಣ ಉಪಗ್ರಹ ಲಾಂಚರ್ಗ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್
ಸಣ್ಣ ಉಪಗ್ರಹ ಲಾಂಚರ್ಗ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್
ಬೆಂಗಳೂರು: ವಿದೇಶಿ ಉಪಗ್ರಹಳನ್ನು ಕಕ್ಷೆಗೆ ಸೇರಿಸಿ ಹಿರಿಮೆ ಹೆಚ್ಚಿಸಿಕೊಂಡಿರುವ ಇಸ್ರೋ ಸಂಸ್ಥೆ ಸಣ್ಣ ಉಪಗ್ರಹ ಲಾಂಚರ್ ಗಳಿಂದ ವಾರ್ಷಿಕ 1,500-2,000 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. 
ಉಪಗ್ರಹ ವಾಹಕದೊಂದಿಗೆ ಕಕ್ಷೆಗೆ ಸೇರಿಸುವ ಸೌಲಭ್ಯಕ್ಕೆ ಅಗತ್ಯವಿರುವ ಎಸ್ಎಸ್ಎಲ್ ವಿ(ಸ್ಮಾಲ್ ಸ್ಯಾಟಲೈಟ್ ಲಾಂಚರ್ಸ್) ಸೌಲಭ್ಯ 2019 ರ ವೇಳೆಗೆ ಲಭ್ಯವಾಗಲಿದ್ದು, ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಣ್ಣ ಉಪಗ್ರಹ ಲಾಂಚರ್ಸ್ ಮೂಲಕ ವಾರ್ಷಿಕವಾಗಿ 1,500-2,000 ಕೋಟಿ ರೂ ಆದಾಯವನ್ನು ಎದುರು ನೋಡುತ್ತಿದೆ. 
ಇಸ್ರೋ ಅಭಿವೃದ್ಧಿಪಡಿಸುತ್ತಿರುವ ಈ ಉಪಗ್ರಹ ವಾಹಕಗಳು 500 ಕೆಜಿ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಲೋ ಅರ್ಥ್‌ ಆರ್ಬಿಟ್‌(ಎಲ್ಇಒ) ನಲ್ಲಿ ಸೇರಿಸಲಿದೆ.  ಇಸ್ರೋದ ಎಸ್ಎಸ್ಎಲ್ ವಿ ಅಭಿವೃದ್ಧಿಯ ಹಂತದಲ್ಲಿದ್ದು, ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಹೊಸ ಲಾಂಚ್ ವೆಹಿಕಲ್ ಗಾಗಿ ಹೊಸ ಲಾಂಚ್ ಬೇಸ್ ನ ಹುಡುಕಾಟದಲ್ಲಿದೆ ಎಂದು ಆಂಟ್ರಿಕ್ಸ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ರಾಕೇಶ್ ಹೇಳಿದ್ದಾರೆ. ಲಾಂಚ್ ವೆಹಿಕಲ್ ನ ಉತ್ಪಾದನೆಯಲ್ಲಿ ಖಾಸಗಿ ಸಹಭಾಗಿತ್ವವೂ ಇರಲಿದ್ದು, ವಾರ್ಷಿಕ 50-60 ಎಸ್ಎಸ್ಎಲ್ ವಿಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 
ಹಲವು ರಾಷ್ಟ್ರಗಳು ಹಾಗೂ ಸಂಸ್ಥೆಗಳು ತಮ್ಮ ಸೇವೆಗಳನ್ನು ಒದಗಿಸುವುದಕ್ಕೆ ಉಪಗ್ರಹಗಳನ್ನು ಉಡಾವಣೆ  ಮಾಡಲಿವೆ, ಕೆಲವೇ ಕೆಲವು ಸಂಸ್ಥೆಗಳು ಸಣ್ಣ ಉಪಗ್ರಹಗಳಿಗೆ ತಮ್ಮದೇ ಆದ ಲಾಂಚ್ ವೆಹಿಕಲ್ ಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿವೆ, ಈ ಪೈಕಿ ಹಲವು  ಸ್ಟಾರ್ಟ್ ಅಪ್ ಗಳಾಗಿದ್ದರಿಂದ ಇಸ್ರೋಗೆ ಅವಕಾಶಗಳು ಹೆಚ್ಚಿದ್ದವು ಎಂದು  ರಾಕೇಶ್ ಹೇಳಿದ್ದಾರೆ. 
ಎಸ್ಎಸ್ಎಲ್ ವಿಗಳ ವೆಚ್ಚ ಪಿಎಸ್ಎಲ್ ವಿ ಗಳ 10 ನೇ ಒಂದರಷ್ಟಿರಲಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಕಕ್ಷೆಗೆ ಸೇರಿಸಬಹುದಾಗಿದೆ. 72 ಗಂಟೆಗಳಲ್ಲಿ ಸಿದ್ಧಪಾಡಿಸಿ 3-6 ಜನರ ತಂಡ ಉಡಾವಣೆ ಮಾಡಬಹುದಾಗಿದೆ ಎಂದು ಇಸ್ರೋ ಅಧ್ಯಕ್ಷರು ಎಸ್ಎಸ್ಎಲ್ ವಿ ಬಗ್ಗೆ ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com