ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಯನ್ನು ಪ್ರವೇಶಿಸಿವೆ, ನಾವು ಗುರುತಿಸಿಲ್ಲ: ನಾಸಾ ವಿಜ್ಞಾನಿ

ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ, ಆದರೆ ಮಾನವರು ಅವುಗಳನ್ನು ಗುರುತಿಸಲು ಅಸಮರ್ಥರಾಗಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಮೌಂಟೇನ್.....
ವಾಷಿಂಗ್ಟನ್: ಅನ್ಯಗ್ರಹ ಜೀವಿಗಳು ಇದಾಗಲೇ ಭೂಮಿಗೆ ಭೇಟಿ ನೀಡಿರುವ ಸಾಧ್ಯತೆ ಇದೆ, ಆದರೆ ಮಾನವರು ಅವುಗಳನ್ನು ಗುರುತಿಸಲು ಅಸಮರ್ಥರಾಗಿದ್ದಾರೆ ಎಂದು ಕ್ಯಾಲಿಫೋರ್ನಿಯಾದ ಮೌಂಟೇನ್ ವ್ಯೂನಲ್ಲಿನ ನಾಸಾ ಅಮೆಸ್ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.
ನಾಸಾ ಸಂಶೋಧನಾ ಕೇಂದ್ರದ ವಿಜ್ಞಾನಿ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ಒಂದು ಸಂಶೋಧನಾ ಪ್ರಬಂಧದಲ್ಲಿ ಹೇಳಿದಂತೆ  ಮಾನವರು ಭೂಮಿಗೆ ಬಂದಿರುವ ಅನ್ಯಗ್ರಹ  ಜೀವಿಗಳನ್ನು ನೋಡಲು ವಿಫಲರಾಗಿದ್ದಾರೆ, ಏಕೆಂದರೆ ಅವರು ಇಂಗಾಲಆಧಾರಿತ ಜೀವಿಗಳನ್ನು ಹೋಲುವುದಿಲ್ಲ ಎಂದಿದ್ದಾರೆ. ಇಂಡಿಪೆಂಡೆಂಟ್ ನಲ್ಲಿ ಈ ವರದಿ ಪ್ರಕಟವಾಗಿದೆ.
ಈಗಾಗಲೇ ಪತ್ತೆ ಮಾಡಲಾಗದ ಅನ್ಯಗ್ರಹದ ಜೀವಿಗಳು ಭೂಮಿಗೆ ಬಂದಿರಬಹುದು ಎಂದು ನಾನು ಕಲ್ಪಿಸುತ್ತೇನೆ. ನಾವು ಅವುಗಳ ಬಗ್ಗೆ ಇರುವ ಕಲ್ಪನೆಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
ನಾವು ಕೇವಲ ಕಲ್ಪನೆ ಮಾತ್ರದಿಂದ ಅವುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಬಳಸಿ ಇವುಗಳನ್ನು ಪತ್ತೆ ಹಚ್ಚಲು ಮುಂದಾಗಬೇಕು
ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡರೂ ಇವೆಲ್ಲವನ್ನೂ ಹೊರತಾಗಿಸಿ ಅನ್ಯಗ್ರಹ ಜೀವಿಗಳು ಭೂಮಿಯನ್ನು ಪ್ರವೇಶಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

Related Stories

No stories found.

Advertisement

X
Kannada Prabha
www.kannadaprabha.com