ಸ್ಯಾಮ್ ಸಂಗ್ 3 ಗ್ಯಾಲೆಕ್ಸಿM ಸರಣಿ ಜನವರಿಗೆ ಬಿಡುಗಡೆ: ಹೀಗಿರಲಿದೆ ಹೊಸ ಮಾದರಿಯ ಸ್ಮಾರ್ಟ್ ಫೋನ್

ಹೊಸ ವರ್ಷಕ್ಕೆ ಸ್ಯಾಮ್ ಸಂಗ್ ನ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲಿದ್ದು, ಹೊಸ ಗ್ಯಾಲಕ್ಸಿM ಸರಣಿಯ ಮೊಬೈಲ್ ಗಳು ಮಾರುಕಟ್ಟೆಗೆ ಬರಲಿದ್ದು, ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.
ಸ್ಯಾಮ್ ಸಂಗ್ ಇಂಡಿಯಾ
ಸ್ಯಾಮ್ ಸಂಗ್ ಇಂಡಿಯಾ
ನವದೆಹಲಿ: ಹೊಸ ವರ್ಷಕ್ಕೆ ಸ್ಯಾಮ್ ಸಂಗ್ ನ ಹೊಸ ಮೊಬೈಲ್ ಮಾರುಕಟ್ಟೆಗೆ ಬರಲಿದ್ದು, ಹೊಸ ಗ್ಯಾಲಕ್ಸಿM ಸರಣಿಯ ಮೊಬೈಲ್ ಗಳು  ಮಾರುಕಟ್ಟೆಗೆ ಬರಲಿದ್ದು, ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. 
ಐಎಎನ್ಎಸ್ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ, ಜಾಗತಿಕಮಟ್ಟದಲ್ಲಿ ಮೊದಲ ಬಾರಿಗೆ ಭಾರತದಲ್ಲೇ ಬಿಡುಗಡೆಯಾಗಲಿದೆ. ಇಂಡಸ್ಟ್ರಿಯಲ್ಲೇ ಹಲವು ಪ್ರಥಮಗಳನ್ನು ಹೊಂದಿರುವ ಮೊಬೈಲ್ ಸ್ಮಾರ್ಟ್ ಫೋನ್ ಸ್ಯಾಮ್ ಸಂಗ್ 3 ಗ್ಯಾಲೆಕ್ಸಿಯಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಗ್ಯಾಲೆಕ್ಸಿ M30 ಮೊಬೈಲ್ ಗಳು ಎಕ್ಸ್ನೊಸ್ 7885 ಚಿಪ್ ನ್ನು ಹೊಂದಿರಲಿದ್ದು, 4 ಜಿಬಿ ರ್ಯಾಮ್ ಇರಲಿದೆ. ಸ್ಯಾಮ್ ಸಂಗ್ ನ ಮೊದಲ 3 ಹಾಗೂ ಕ್ವಾಡ್ ಹಿಂದಿನ ಕ್ಯಾಮೆರಾ ಸಾಧನಗಳನ್ನೊಳಗೊಂಡ A7, A9 ಸರಣಿಯ ನಂತರ 3 ಗ್ಯಾಲೆಕ್ಸಿM  ಬಿಡುಗಡೆಯಾಗುತ್ತಿದೆ. 
ಮಧ್ಯಮ ಬೆಲೆಯಲ್ಲಿ ಗ್ಯಾಲೆಕ್ಸಿ J ಸರಣಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದ್ದು, 2019 ರಲ್ಲಿ ಬಿಡುಗಡೆಯಾಗಲಿರುವ ಸ್ಯಾಮ್ ಸಂಗ್ 3 ಗ್ಯಾಲೆಕ್ಸಿ M ಸರಣಿಯ ಬಗ್ಗೆ ತೀವ್ರ ಕುತೂಹಲ ಮೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com