ಹೈದರಾಬಾದ್ ಟೆಕ್ಕಿಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಎಸಿ ಹೆಲ್ಮೆಟ್ ಶೋಧ

ಬೇಸಿಗೆ ಇನ್ನೇನು ಕಾಲಿಟ್ಟಿದೆ. ಈ ದಿನಗಳಲ್ಲಿ ಸಾಮಾನ್ಯ ಜನರು ಹೊರಗೆ ಓಡಾಡುವುದೇ ಕಷ್ಟ ಇನ್ನು ಸಿಮೆಂಟ್, ಮರಳು ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗುವ ಕಾರ್ಮಿಕರ..........
ಹೈದರಾಬಾದ್ ಟೆಕ್ಕಿಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಎಸಿ ಹೆಲ್ಮೆಟ್ ಶೋಧ
ಹೈದರಾಬಾದ್ ಟೆಕ್ಕಿಗಳಿಂದ ಕಟ್ಟಡ ಕಾರ್ಮಿಕರಿಗಾಗಿ ಎಸಿ ಹೆಲ್ಮೆಟ್ ಶೋಧ
ಹೈದರಾಬಾದ್: ಬೇಸಿಗೆ ಇನ್ನೇನು ಕಾಲಿಟ್ಟಿದೆ. ಈ ದಿನಗಳಲ್ಲಿ ಸಾಮಾನ್ಯ ಜನರು ಹೊರಗೆ ಓಡಾಡುವುದೇ ಕಷ್ಟ ಇನ್ನು ಸಿಮೆಂಟ್, ಮರಳು ಹಾಗೂ ಇನ್ನಿತರೆ ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗುವ ಕಾರ್ಮಿಕರ ಸ್ಥಿತಿ ಇನ್ನೂ ಚಿಂತಾಜನಕವಾಗಲಿದೆ. ಹೀಗಾಗಿ ಇಂತಹಾ ಕಾರ್ಮಿಕರ ಅನುಕೂಲಕ್ಕೆ ಹೈದರಾಬಾದ್ ಮೂಲದ ಸಂಸ್ಥೆಯೊಂದು ವಿಶೇಷ ಎಸಿ ಹೆಲ್ಮೆಟ್ ತಯಾರಿಸಿದೆ.
ಈ ಹವಾನಿಯಂತ್ರಿತ ಹೆಲ್ಮೆಟ್ ಅನ್ನು ಚಾಂರ್ಜ್ ಮಾಡಿಕೊಳ್ಳಲು ಸಾಧ್ಯವಾಗುವಂತೆ ತಯಾರಿಸಲಾಗಿದ್ದು ಇದನ್ನು ಧರಿಸಿದರೆ ಕೂದಲು ಉದುರುವ ಸಮಸ್ಯೆ ಆಗುವುದಿಲ್ಲ ಎಂದು ಹೆಲ್ಮೆಟ್ ತಯಾರಿಸಿದ ಜಾರ್ಶ್ಸಂಸ್ಥೆಯ  ಇಂಜಿನಿಯರುಗಳ ತಂಡ  ಹೇಳಿದೆ.
ಜಾರ್ಶ್ ಸಂಸ್ಥೆಯ ಹೆಲ್ಮೆಟ್ ಬಳಕೆದಾರ ಸ್ನೇಹಿಯಾಗಿದೆ. ಇದನ್ನು ಮೊಬೈಲ್ ಫೋನ್ ಮಾದರಿಯಲ್ಲಿ ರೀಚಾರ್ಜ್ ಮಾಡಬಹುದು.ಜತೆಗೆ ಇದು ಸುದೀರ್ಘ ಬಾಳಿಕೆ ಬರಲಿದೆ, ಧರಿಸಿದವರಿಗೆ ಆರಾಮದಾಯಕವಾಗಿರಲಿದೆ ಎಂದು ಸಂಸ್ಥೆ ಹೇಳಿದೆ.
250 ಗ್ರಾಂ ತೂಕದ ಈ ಹೆಲ್ಮೆಟ್ ಒಂದರ ಬೆಲೆ 5,000 ರೂ. ಆಗಿರಲಿದೆ..

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com